ಲಾಕ್​ಡೌನ್​ ನಡುವೆಯೂ ಬೆಂಗಳೂರಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ ಬೆಂಗಳೂರು, ಮೇ 03, 2020 (..):ಲಾಕ್​ಡೌನ್​ ನಡುವೆಯೂ ಬೆಂಗಳೂರಲ್ಲಿ ರೌಡಿ ಶೀಟರ್​ ಒಬ್ಬನ ಬರ್ಬರ ಹತ್ಯೆ ನಡೆದಿದೆ. ಬುಜ್ಜು ಅಲಿಯಾಸ್ ಬುಜ್ಜಿ ಹತ್ಯೆಯಾದ ರೌಡಿ ಶೀಟರ್. ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ರೌಡಿ ಡ್ಯಾನಿಯಲ್ ಸಂಬಂಧಿ ಸ್ಟಾಲಿನ್ ಹತ್ಯೆಯಲ್ಲಿ ಬುಜ್ಜು ಭಾಗಿಯಾಗಿದ್ದ ಎನ್ನಲಾಗಿದೆ. ಸ್ಟಾಲಿನ್ ಹತ್ಯೆ ಬಳಿಕ ಆತನ ಸಹಚರರು ಬುಜ್ಜು ಸಹೋದರ ವಿನೋದ್​​ನನ್ನು ಹತ್ಯೆಗೈದಿದ್ದರು. ಬಳಿಕ ಎರಡು ಕಡೆ ಒಂದೊಂದು ಹತ್ಯೆಯಾಗಿದೆ. ಇಬ್ಬರೂ ಸೈಲೆಂಟ್​ ಆಗಿರೋಣ ಎಂದು ಸಂಧಾನ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ರೌಡಿ ಶೀಟರ್ ಬುಜ್ಜು ಹತ್ಯೆಯಾಗಿದೆ. ಹಳೆಯ ದ್ವೇಷ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.