ರಾಜ್ಯದ ಗ್ರೀನ್ ಝೋನ್ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಸಿದ ರಾಜ್ಯ ಸರಕಾರ : ಏನೇನಿರಲಿದೆ ಅಲ್ಲಿ..? ಬೆಂಗಳೂರು, ಏ.28, 2020 : (.. ) ರಾಜ್ಯ ಸರ್ಕಾರ ಹಸಿರು ವಲಯದಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹೊಸ ಮಾರ್ಗ ಸೂಚಿಯ ವಿವರ ಹೀಗಿದೆ….. * ರಾಜ್ಯದ ಗ್ರೀನ್ ಝೋನ್ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ವ್ಯಾಪಾರ, ವಹಿವಾಟಿಗೆ ಅವಕಾಶ* ವಿಶೇಷ ಆರ್ಥಿಕ ವಲಯ, ಕೈಗಾರಿಕಾ ವಲಯ, ಕೈಗಾರಿಕಾ ಟೌನ್ ಶಿಪ್, ರಫ್ತು ಆಧಾರಿತ ವಲಯಗಳಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ.* ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲೇ ತಂಗಲು ಅವಕಾಶ. ಜತೆಗೆ ಸಾರಿಗೆ ವ್ಯವಸ್ಥೆ ಒದಗಿಸಬೇಕು.* ಗ್ರೀನ್ ಜೋನ್ ವ್ಯಾಪ್ತಿಯ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಕಾಂಪ್ಲೆಕ್ಸ್, ವಸತಿ ಸಮುಚ್ಚಯಗಳ ಅಂಗಡಿ ತೆರೆಯಲು ಅನುಮತಿ.* ಮಾರುಕಟ್ಟೆ, ವಸತಿ ಸಮುಚ್ಚಯಗಳಲ್ಲಿ ಶೇ. 50ರಷ್ಟು ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ.* ಗ್ರೀನ್ ಜೋನ್ ನಲ್ಲಿರುವ ಮಾಲ್ ಗಳನ್ನು ತೆರೆಯುವಂತಿಲ್ಲ.* ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧಾರಣೆ ಕಡ್ಡಾಯ.* ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ.ಆರ್ಥಿಕತೆಗೆ ಪುನಶ್ಚೇತನ ನೀಡಲು ಸರ್ಕಾರ ಕೆಲವು ಸಡಿಲಿಕೆ ಮಾಡಿರುವ ಈ ಹೊಸ ಮಾರ್ಗಸೂಚಿಗಳು, ರೆಡ್ ಝೋನ್ ವ್ಯಾಪ್ತಿಯ ಜಿಲ್ಲೆಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜತೆಗೆ ಮೇ.3 ರವರೆಗೆ ಈ ಹೊಸ ಗೈಡ್ ಲೈನ್ಸ್ ಅನ್ವಯವಾಗಲಿದ್ದು, ಆ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಗ್ರೀನ್ ಝೋನ್ ಜಿಲ್ಲೆಗಳು : * ಚಾಮರಾಜನಗರ* ಚಿತ್ರದುರ್ಗ* ರಾಮನಗರ* ಹಾಸನ* ದಾವಣಗೆರೆ* ಚಿಕ್ಕಮಗಳೂರು* ರಾಯಚೂರು* ಕೊಪ್ಪಳ* ಕೋಲಾರ* ಯಾದಗಿರಿ* ಹಾವೇರಿ* ಉಡುಪಿ : -.---——————————–