ರಾಮನಗರ ಜೈಲಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಪಾದರಾಯನಪುರದ ಕೊರೊನಾ ಸೋಂಕಿತರು ಶಿಫ್ಟ್ ರಾಮನಗರ, ಏಪ್ರಿಲ್ 24, 2020 (..):ರಾಮನಗರ ಜೈಲಿಗೆ ಬೆಂಗಳೂರಿನಿಂದ ಕರೆತಂದಿದ್ದ ಪಾದರಾಯನಪುರದ ಪುಂಡರಲ್ಲಿ ಇಬ್ಬರು ಕೈದಿಗಳಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಸೋಂಕು ಇರುವ ಇಬ್ಬರು ಆರೋಪಿಗಳನ್ನು ಮಧ್ಯರಾತ್ರಿ ಸುಮಾರು 1 ಗಂಟೆಗೆ ಆಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ತುರ್ತು ಸಭೆ ನಡೆಸಿದ ಜಿಲ್ಲಾಡಳಿತ ಇಂದು ಉಳಿದ ಎಲ್ಲಾ ಆರೋಪಿಗಳನ್ನು ಹಜ್ ಭವನಕ್ಕೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಂಡಿತ್ತು. ಆದರೆ ಬೆಳ್ಳಂಬೆಳಿಗ್ಗೆ ಶುರುವಾದ ಮಳೆಯಿಂದಾಗಿ ಅವರ ಸ್ಥಳಾಂತರಕ್ಕೆ ಅಡ್ಡಿಯಾಗಿದೆ. ಪಾದರಾಯನಪುರದ ಆರೋಪಿಗಳನ್ನು ಶಿಫ್ಟ್ ಮಾಡಲು ಬಂದಿದ್ದ ಬಸ್ ಗಳು ವಾಪಸ್ ತೆರಳಿವೆ.