ರಾಮನಗರ ಬಳಿ ನಡೆದ ಅಪಘಾತದಲ್ಲಿ ಪಬ್ಲಿಕ್ ಟಿವಿ ವರದಿಗಾರ ಮೃತ ರಾಮನಗರ, ಏ.21, 2020 : (.. ) ಇಲ್ಲಿನ ‘ ಪಬ್ಲಿಕ್ ಟಿವಿ‌ ‘ ವರದಿಗಾರ ಹನುಮಂತು ವಾಹನ ಅಪಘಾತದಲ್ಲಿ ಮೃತಪಟ್ಟರು. ಬೆಂಗಳೂರು ಪಾದರಾಯನಪುರ ಗಲಭೆಯ ಆರೋಪಿಗಳನ್ನ ಇಂದು ರಾಮನಗರದ ಕಾರಾಗೃಹಕ್ಕೆ ಕರೆತರಲಾಗಿತ್ತು. ಈ ಸುದ್ದಿಯನ್ನು ಕವರ್ ಮಾಡಿ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಹನ ವರದಿಗಾರ ಹನುಮಂತು ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ರಾಮನಗರದ ಕಾರಾಗೃಹದ ಬಳಿ ಘಟನೆ. ವಿವಾಹವಾಗಿ ಮೂರು ವರ್ಷವಾಗಿತ್ತು. ಒಂದು ವರ್ಷದ ಒಂದು ಮಗು ಹನುಮಂತು ಅವರಿಗಿದೆ. ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ‌ ಮಿಡಿದಿದ್ದಾರೆ. ಕುಮಾರಸ್ವಾಮಿ ಕಂಬನಿ : ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಮಾಜಿ ಸಿಎಂ ಹೆಚ್ಡಿಕೆ ಮತ್ತು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ.ವಿಧಿವಶರಾದ ಪಬ್ಲಿಕ್ ಟಿವಿ ಹನುಮಂತು ಕುಟುಂಬಕ್ಕೆ ವೈಯುಕ್ತಿಕ 5 ಲಕ್ಷ ಪರಿಹಾರ ಘೋಷಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ. ಆರೋಗ್ಯ ಸಮಸ್ಯೆ ಇರುವ ಹನುಮಂತು ಮಗುವಿನ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರುವುದಾಗಿ ತಿಳಿಸಿದ ಮಾಜಿ ಸಿಎಂ ಹೆಚ್ಡಿಕೆ. : -------