ಕೊರೊನಾ ಮುಕ್ತ ರಾಜ್ಯ ಎಂದು ಘೋಷಿಸಿದ ಗೋವಾ ಸಿಎಂ ನವದೆಹಲಿ,ಏಪ್ರಿಲ್ 21, 2020 (..):ಗೋವಾ ಕೊರೊನಾ ಮುಕ್ತ ರಾಜ್ಯವಾಗಿದೆ. ಗೋವಾದಲ್ಲಿ ಕೊರೊನಾ ಸೋಂಕಿತ ಒಬ್ಬ ವ್ಯಕ್ತಿಯೂ ಇಲ್ಲ. ಗೋವಾ ಅಳವಡಿಸಿಕೊಂಡ ನಿಯಮಗಳು ದೇಶಕ್ಕೆ ಮಾದರಿಯಾಗಬೇಕಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯದಲ್ಲಿ ಒಬ್ಬ ಕೋವಿಡ್ -19 ರೋಗಿಯೂ ಇಲ್ಲ ಎಂದು ಘೋಷಿಸಿದ್ದಾರೆ. ಅದೇ ಸಮಯದಲ್ಲಿ ಇದುವರೆಗೆ ಮಾಡಿದಂತೆ ಮೇ 3 ರವರೆಗೆ ಲಾಕ್ಡೌನ್ ಗಂಭೀರವಾಗಿ ಜಾರಿಯಲ್ಲಿರಲಿದೆ ಎಂದಿದ್ದಾರೆ. ಗೋವಾದಲ್ಲಿ 7 ಸೋಂಕಿತರು ಕಂಡು ಬಂದಿದ್ದರು. ಅವ್ರಿಗೆ ಚಿಕಿತ್ಸೆ ನೀಡುವ ಜೊತೆಗೆ ಅವ್ರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಯ್ತು. ಎಲ್ಲ 7 ರೋಗಿಗಳು ಗುಣಮುಖರಾಗಿದ್ದು, ಮತ್ತ್ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ.