ಮಹಾರಾಷ್ಟ್ರದಲ್ಲಿ 8 ದಿನದ ಹಸುಗೂಸಿಗೆ ಕೊರೊನಾ ಸೋಂಕು ದೃಢ ಮುಂಬೈ , ಏಪ್ರಿಲ್ 19, 2020 (..):ಮಹಾರಾಷ್ಟ್ರದಲ್ಲಿ 8 ದಿನದ ಹಸುಗೂಸಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಪಾಲ್ಗಾರ್ ಜಿಲ್ಲೆಯ ವಾಸವಿ ವಿಹಾರಗ ಮುನ್ಸಿಪಲ್​​​ ವ್ಯಾಪ್ತಿಯಲ್ಲಿ 8 ದಿನದ ಮಗುವಿಗೆ ಕೊರೋನಾ ಸೋಂಕು ತಗುಲಿದೆ. ಆದರೆ ಮಗುವಿನ ತಾಯಿಗೆ ಕೊರೋನಾ ಸೋಂಕು ಇರಲಿಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಹಸುಗೂಸಿನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಈ ವೇಳೆ, ವಿವಿಎಂಸಿಯ ಜಯಚಂದ್ರ ಮೆಡಿಕಲ್​ನಲ್ಲಿ ಕೊರೋನಾ ಪಾಸಿಟಿವ್ ಪರೀಕ್ಷೆ ನಡೆಸಲಾಗಿದೆ. ಮಗುವಿನ ತಾಯಿಗೆ ಕೊರೋನಾ ನೆಗೆಟಿವ್ ಬಂದಿದೆ. ಮಗು ಹುಟ್ಟಿದ ಬಳಿಕ ಹಸುಗೂಸಿಗೆ ಕೊರೋನಾ ಇರುವುದು ಖಚಿತವಾಗಿದೆ.