ಹಾಸನ: ಮದ್ಯ ಕಳ್ಳತನಕ್ಕೆ ಬಂದು ಅಲ್ಲೇ ಕಂಠಪೂರ್ತಿ ಕುಡಿದು ಮಲಗಿ ಸಿಕ್ಕಿಬಿದ್ದ ಭೂಪ ! ಹಾಸನ, ಏಪ್ರಿಲ್ 16, 2020 (..):ಮದ್ಯ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಭೂಪ… ಕಳ್ಳತನಕ್ಕೆ ಬಂದು ಆಸೆಯಿಂದ ಬಾರ್ ಒಳ ನುಗ್ಗಿ ಕಂಠ ಪೂರ್ತಿ ಕುಡಿದು ಅಲ್ಲೆ ನಿದ್ರೆ ಮಾಡಿ ಬೆಳಗ್ಗೆ ಸಿಕ್ಕಿಬಿದ್ದಿದ್ದಾನೆ. ಹಾಸನದ ವಲ್ಲಭಾಯಿ ರಸ್ತೆಯ ರೌಡಿ ಶೀಟರ್ ರೋಹಿತ್ ಅಲಿಯಾಸ್ ಕೋಕಿ ಬಂಧಿತ ಆರೋಪಿ. ಬೆಳಿಗ್ಗೆ ಬಂದು ಅಂಗಡಿ ಪರಿಶೀಲನೆ ವೇಳೆ ಸಿಕ್ಕಿ ಬಿದ್ದ ಕುಡುಕ.ಬಾರ್ ನ ಹೆಂಚು ತೆಗೆದು ಒಳ ಸೇರಿಕೊಂಡಿದ್ದ ಕುಡುಕ.ಬಾರ್ ಒಳಗೇ ಕಂಠ ಪೂರ್ತಿ ಕುಡಿದು ಒಳಗೆ ನಿದ್ರೆ… ಚೆನ್ನಾಗಿ ಕುಡಿದು ಮದ್ಯ ಕಳ್ಳತನಕ್ಕೆ ಸ್ಕೆಚ್ ಹಾಕಿ ಒಳನುಗ್ಗಿದ್ದ ಕಳ್ಳ ಕುಡುಕ. ಹಾಸನದ ಸಂತೆಪೇಟೆಯ ಪ್ರಿಯದರ್ಶಿನಿ ಬಾರ್ ನಲ್ಲಿ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ನಿದ್ರೆಗೆ ಜಾರಿ ಸಿಕ್ಕಿ ಬಿದ್ದ ಮದ್ಯ ಕಳ್ಳ.ಆರೋಪಿಯನ್ನ ವಶಕ್ಕೆ ಪಡೆದ ಪೆನ್ಷನ್ ಮೊಹಲ್ಲಾ ಪೊಲೀಸರು.ಎರಡು ಬಾಕ್ಸ್ ಎಣ್ಣೆ ಕದ್ದೊಯ್ಯಲು ಯತ್ನ.ಬಾರ್ ನಲ್ಲಿ ಎಣ್ಣೆ ಸಿಕ್ಕಿದ್ದರಿಂದ ಕಂಠಪೂರ್ತಿ ಕುಡಿದು ಟೈಟಾಗಿ ಬಾರ್ ನಲ್ಲಿ‌ ಮಲಗಿದ ಮದ್ಯಪ್ರಿಯ.