ಜ್ಯುಬಿಲಿಯಂಟ್ ಪರ ವಿರೋಧ: ಶಾಸಕ-ಸಂಸದರಿಗೆ ಟಾಂಗ್ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮೈಸೂರು, ಏಪ್ರಿಲ್ 15, 2020 (..):ಜ್ಯುಬಿಲಿಯಂಟ್ ಕಂಪನಿ ವಿಚಾರವಾಗಿ ಶಾಸಕ, ಸಂಸದರ ವಿಭಿನ್ನ ಹೇಳಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲಾಧಿಕಾರಿ ಏನು ಹೇಳುತ್ತಾರೆ ಅದೇ ಸರ್ಕಾರದ ಅಧಿಕೃತ ಹೇಳಿಕೆ. ಸಂಸದ ಪ್ರತಾಪ್‌ಸಿಂಹ ಶಾಸಕ ಹರ್ಷವರ್ಧನ್‌ಗೆ ಎಸ್ ಟಿ ಸೋಮಶೇಖರ್ ಟಾಂಗ್ ನೀಡಿದ್ದಾರೆ. ಜ್ಯುಬಿಲಿಯಂಟ್ ಕಂಪನಿ ವಿರುದ್ದ ಶಾಸಕ ಹರ್ಷವರ್ಧನ್, ಜ್ಯುಬಿಲಿಯಂಟ್ ಪರ ಸಂಸದ ಪ್ರತಾಪ್‌ಸಿಂಹ ಮಾತನಾಡಿದ್ದರು. ಎಲ್ಲವೂ ಸರಿಯಾಗುವ ತನಕ ಜ್ಯುಬಿಲಿಯಂಟ್ ಕಂಪನಿ ತೆರಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸೋಮಶೇಖರ್ ಸ್ಪಷ್ಟನೆ ನೀಡಿದರು. ಮೊದಲು ಎಲ್ಲವೂ ತಿಳಿಯಾಗಬೇಕು. ನೆಮ್ಮದಿಯಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು. ಆಗ ಮಾತ್ರ ಕಂಪನಿ‌ ತೆರೆಯಲು ಅನುಮತಿ ನೀಡಲಾಗುವುದು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.