ಲಾಕ್ ಡೌನ್ ವಿಸ್ತರಣೆ: ಕೆ.ಆರ್.ಪೇಟೆಯಲ್ಲಿ‌ ಸಚಿವ ನಾರಾಯಣಗೌಡರಿಂದ ಅಧಿಕಾರಿಗಳ ಸಭೆ ಮಂಡ್ಯ, ಏಪ್ರಿಲ್ 14, 2020 (..): ಕೆ .ಆರ್ .ಪೇಟೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ‌ ಸಭೆ ನಡೆಸಿದರು. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಲಾಕ್ ಡೌನ್ ಮುಂದುವರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾರ್ಗಸೂಚಿಯಂತೆ ಆಹಾರ ಸಾಮಗ್ರಿ ವಿತರಣೆ ಆಗಬೇಕು. ವೈರಸ್ ಹರಡದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಸೂಚನೆ ನೀಡಿದರು. ಕೆಆರ್ ಪೇಟೆ ಕೌನ್ಸಿಲರ್ಸ್, ತಹಸಿಲ್ದಾರ್ ಶಿವಮೂರ್ತಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲಿಸ್, ಕಂದಾಯ ಹಾಗೂ ಮುನ್ಸಿಪಾಲ್ಟಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು