ಕಾರ್ಮಿಕರ ಹಸಿವು ನೀಗಿಸಲು ಜೋಳಿಗೆಯೊಡ್ಡಿದ ಸ್ವಾಮೀಜಿ. ಬೆಂಗಳೂರು, ಏ.07, 2020 : (.. ) ಲಾಕ್ ಡೌನ್ ಈ ಬಿಕ್ಕಟ್ಟಿನ ಸಮಯದಲ್ಲಿ, ಬೆಂಗಳೂರು ಆನೇಕಲ್ ಸಮೀಪದ ಶಿವನಹಳ್ಳಿಯ ರಾಮಕೃಷ್ಣ ಮಿಷನ್, ಹಸಿದವರಿಗೆ ನಿರಂತರ ಆಹಾರ ಪೂರೈಕೆಗೆ ತನ್ನೆಲ್ಲಾ ಸಂಪನ್ಮೂಲ ಸಜ್ಜುಗೊಳಿಸಲು ಅವಿರತ ಶ್ರಮಿಸುತ್ತಿದೆ. ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಕಾರ್ಮಿಕ ವರ್ಗದ ಜನತೆಗೆ ಸಹಾಯ ಹಸ್ತ ಚಾಚಿದೆ. ಇದರ ಹಿಂದಿನ ಪ್ರಮುಖ ಶಕ್ತಿ ವಿಷ್ಣುಮಾಯಾನಂದ ಸ್ವಾಮೀಜಿ. ಈ ಸಂದಿಗ್ಧ ಕಾಲದಲ್ಲಿ ಈಗ ‘ ಪೂರೈಕೆ-ಸರಪಳಿ ‘ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸ್ವಾಮೀಜಿ ಶ್ರಮಿಸುತ್ತಿದ್ದಾರೆ. ಶಿವನಹಳ್ಳಿಯ ರಾಮಕೃಷ್ಣ ಮಿಷನ್ ನಡೆಸುತ್ತಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳು ಸ್ವಾಮೀಜಿಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಆಹಾರ ಕಾರ್ಯಾಚರಣೆಯ ಭಾಗವಾಗಲು ಉತ್ತಮ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. ಪೊಲೀಸರು, ಅಧಿಕಾರಿಗಳ ಜತೆ ಸ್ವಾಮೀಜಿ ಸಭೆ ನಡೆಸಿ , ಸಮುದಾಯ ಆಹಾರ ಸಿದ್ಧತೆ ಮೂಲಕ ಜಿಗಣಿಯ ಕಾರ್ಮಿಕ ವರ್ಗಕ್ಕೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತಿದೆ. ವಲಸೆ ಕಾರ್ಮಿಕರಿಗೆ ಆಹಾರಕ ವಿತರಿಸಲು ಸ್ವಾಮೀಜಿ ಮುಂದಾದ ಕೂಡಲೇ ಇನ್ಫೋಸಿಸ್ ಫೌಂಡೇಶನ್ ನ ಸುಧಾಮೂರ್ತಿ , 35 ಲಕ್ಷ ರೂ. ಆರ್ಥಿಕ ನೆರವು ನೀಡಿದರು. ಈ ಹಣದ ಸಹಾಯದಿಂದಲೇ ಈತನಕ ಮಿಷನ್ ಆಹಾರ ವಿತರಣೆ ನಡೆಸಿತು. ಆದರೆ ಇದೀಗ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದೆ. ಆದ್ದರಿಂದಲೇ ಆಹಾರ ಪೂರೈಕೆಯ ಈ ಕಾರ್ಯ ಸರಾಗವಾಗಿ ಮುಂದುವರೆಯಲು ಧಾನಿಗಳು ಸಹಾಯ ಹಸ್ತ ಚಾಚಬೇಕಿದೆ. ಜಿಗಣಿಯಲ್ಲಿನ ಕಾರ್ಮಿಕರಿಗೆ ಆಹಾರ ನೀಡಲು ನಮಗೆ ಸಹಾಯ ಮಾಡಿ ಎಂದು ಸ್ವಾಮೀಜಿ ವಿನಂತಿಸಿದ್ದಾರೆ. ರಾಗಿಹಳ್ಳಿಯಲ್ಲಿರುವ ಸಮುದಾಯ ಅಡಿಗೆ ಆಹಾರ ಕೇಂದ್ರದ ಮೂಲಕ ಆಹಾರ ಸಿದ್ಧಪಡಿಸಲಾಗುತ್ತದೆ. ಸುಮಾರು 6,200 ಕಾರ್ಮಿಕರಿಗೆ (ಏಪ್ರಿಲ್ 6 ತನಕ) ಆಹಾರ ವಿತರಿಸಲಾಗಿದೆ. ಪ್ರತಿ ದಿನ 700 ಕೆಜಿ ಅಕ್ಕಿ ಮತ್ತು ತರಕಾರಿಗೆಂದು 50,000 ರೂ ವೆಚ್ಚವಾಗುತ್ತದೆ. ಪ್ರತಿ ದಿನದ ಅಂದಾಜು ವೆಚ್ಚ 2 ಲಕ್ಷ ರೂ. ಅಂದಾಜು 200 ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಮಧ್ಯರಾತ್ರಿಯಲ್ಲಿ ಸಗಟು ಮಾರುಕಟ್ಟೆಗಳಿಗೆ ತೆರಳಿ ದಿನಸಿ ಮತ್ತು ತರಕಾರಿಗಳನ್ನು ಖರೀದಿಸಿ ತಂದು ಆಹಾರ ಸಿದ್ಧತೆಗೆ ಸಹಕರಿಸುತ್ತಿದ್ದಾರೆ. ಗಮನಾರ್ಹ ವಿಷಯವೆಂದರೆ, ಆಹಾರ ತಯಾರಿಕೆ ಮತ್ತು ವಿತರಣೆ ವೇಳೆ ಸ್ವಯಂಸೇವಕರು ಸ್ವಚ್ಛತೆಗೆ ಆಧ್ಯತೆ ನೀಡಿ ಸರಕಾರ ನಿಗಧಿ ಪಡಿಸಿರುವ ನಿಯಮಗಳನ್ನು ಪಾಲಿಸುತ್ತಿರುವುದು. ಪೊಲೀಸ್ ಮತ್ತು ಕಂದಾಯ ನಿರೀಕ್ಷಕರ ಸಹಾಯದಿಂದ ಅರ್ಹ ವ್ಯಕ್ತಿಗಳನ್ನುಗುರುತಿಸಿ ಅವರಿಗೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಜತೆಗೆ ಸ್ವಯಂಸೇವಕರು ಹತ್ತಿ ಬಟ್ಟೆಗಳಿಂದ ಮಾಸ್ಕ್ ತಯಾರಿಕೆಯಲ್ಲಿ ನಿರತವಾಗಿದ್ದು ಅವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಬೃಹತ್ ಸಮಾಜಮುಖಿ ಕಾರ್ಯ ಮುಂದುವರೆಸಲು ಸಾಕಷ್ಟು ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಇದೆ. ಈ ತನಕ ಸ್ವಾಮೀಜಿ ನೇತೃತ್ವದಲ್ಲಿ ಸ್ವಯಂಸೇವಕರ ತಂಡ ಈ ಕಾರ್ಯ ನಿರ್ವಹಿಸಿದ್ದು, ಇದು ಮತ್ತಷ್ಟು ಯಶಸ್ವಿಗೊಳ್ಳಲು ದಾನಿಗಳ ಉದಾರ ಕೊಡುಗೆ ಅತ್ಯಾವಶ್ಯಕ. ಈ ಹಿನ್ನೆಲೆಯಲ್ಲಿ ಈಗ ರಾಮಕೃಷ್ಣ ಮಿಷನ್, ದಾನಿಗಳ ಬೆಂಬಲಕ್ಕಾಗಿ ಎದುರು ನೋಡುತ್ತಿದೆ. ಈ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚುವವರು ಸ್ವಯಂ ಸೇವಕರಾದ ಮುರಳಿ ಅವರನ್ನು 94812 47783 ಸಂಪರ್ಕಿಸುವುದು. : - - - - . , , . – – . . , , ‘-’ . , , . , . . . 6, . , . , 35 , . , ’ . “ . ,” . . 6,200 ( 6) . 700 50,000 . 2 . 200 . . . . 40, . . . . . . . . ’ . , . ? ? , ? . . , 94812 47783; -: @.://.-./?=/-(: , - – ashabangalore5@.)-