ತೆಲಂಗಾಣದಲ್ಲಿ ರಸ್ತೆ ಅಪಘಾತ, ಕರ್ನಾಟಕ 7 ಮಂದಿ ಕಾರ್ಮಿಕರು ಮೃತ. ಹೈದರಾಬಾದ್, ಮಾ.28, 2020 (.. ): ಶುಕ್ರವಾರ ತಡರಾತ್ರಿ ನಗರದ ಹೊರವಲಯದಲ್ಲಿರುವ ಪೆಡ್ಡಾ ಗೋಲ್ಕೊಂಡಾ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಏಳು ಕಾರ್ಮಿಕರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪೈಕಿ ಇಬ್ಬರು ಮಕ್ಕಳು. ಅಪಘಾತ ಸಂಭವಿಸಿದ ವ್ಯಾನ್‌ನಲ್ಲಿದ್ದ 31 ಕಾರ್ಮಿಕರ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. ವ್ಯಾನ್‌ನಲ್ಲಿದ್ದ ಇತರ ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಕಾರ್ಮಿಕರು ಕರ್ನಾಟಕದ ತಮ್ಮ ಊರಾದ ರಾಯಚೂರಿಗೆ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಇವರೆಲ್ಲಾ ಇಲ್ಲಿನ ಸೂರ್ಯಪೇಟೆಯ ರಸ್ತೆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಆಗಿದ್ದರಿಂದ ರಸ್ತೆ ನಿರ್ಮಾಣ ಯೋಜನೆ ಸಹ ಸ್ಥಗಿತಗೊಂಡಿತ್ತು. ಇದರಿಂದ ಜೀವನ ನಿರ್ವಹಣೆ ದುಸ್ತರವಾಗಿ ಸ್ವಂತ ಊರಿಗೆ ತೆರಳು ಮುಂದಾಗಿದ್ದರು. ಈ ವೇಳೆ ಗುಜರಾತ್‌ಗೆ ತೆರಳುತ್ತಿದ್ದ ಮಾವು ತುಂಬಿದ ಟ್ರಕ್ ಅತಿಯಾದ ವೇಗದಲ್ಲಿ ಬಂದು ಕಾರ್ಮಿಕರು ತೆರಳುತ್ತಿದ್ದ ವ್ಯಾನ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಅಪಘಾತ ಸಂಭವಿಸಿ ದುರ್ಘಟನೆ ನಡೆದಿದೆ ಎಂಬುದು ಆರಂಭಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. : - - - - - : , . 31 , , . , , . , . , , .