ಕರೋನಾ ನಾವ್ ಏನ್ ಕಮ್ಮೀನಾ : ಆ್ಯಪ್ ಮೂಲಕವೇ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ತರಗತಿ. ಮೈಸೂರು, ಮಾ.27, 2020 : (.. ) ‘ ಝೂಮ್ ‘ ಮೀಟಿಂಗ್ ಅಪ್ಲಿಕೇಶನ್ ಬಳಸಿ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಸೆಷನ್ ನಡೆಸಲು ಮುಂದಾಗಿದ್ದಾರೆ ಮೈಸೂರು ವಿವಿಯ ಸಹ ಪ್ರಾಧ್ಯಾಪಕಿ. ಮೈಸೂರು ವಿವಿ ಮಾನಸಗಂಗೋತ್ರಿಯ ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಸಪ್ನಾ ಈ ವಿನೂತನ ಪ್ರಯೋಗಕ್ಕೆ ಮುಂದಾಗಿರುವವರು. ಕರೋನಾ ಭೀತಿಯಿಂದ ಲಾಕ್ ಡೌನ್ ಹೇರಿರುವ ಕಾರಣ ತರಗತಿಗಳು ಸಹ ನೆನೆಗುದಿಗೆ ಬಿದ್ದಿವೆ. ಪರಿಣಾಮ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನಿಗಧಿಪಡಿಸಿದ್ದ ಸಿಲಬಸ್ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಾ. ಎಂ.ಎಸ್. ಸಪ್ನಾ, ಝೂಮ್ ಆ್ಯಪ್ ನೆರವನ್ನು ಸದುಪಯೋಗ ಪಡಿಸಿಕೊಂಡು ಪೋರ್ಷನ್ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಡಾ.ಎಂ.ಎಸ್. ಸಪ್ನಾ ಅವರ ಈ ವಿನೂತನ ಪ್ರಯತ್ನದ ಕಾರಣ, ಇಂದಿನಿಂದಲೇ ತರಗತಿಗಳು ಆರಂಭಗೊಂಡಿವೆ. ಇದು ಪ್ರತಿದಿನ ಒಂದು ಗಂಟೆ ನಡೆಯಲಿದೆ. ಜೂಮ್ ಮೀಟಿಂಗ್ ಆ್ಯಪ್ ಅನ್ನು ಬಳಸುವ ಮೂಲಕ ಏಕಕಾಲದಲ್ಲಿ 8 ರಿಂದ 10 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬಹುದು. ಜತೆಗೆ ಸಂಪರ್ಕಿಸುವ ಮತ್ತು ಉಪನ್ಯಾಸಗಳನ್ನು ಹೊಂದಿರುವ ದಾಖಲೆಗಳನ್ನು ಹಂಚಿಕೊಳ್ಳುವುದು ತುಂಬಾ ಸುಲಭ.ಆದ್ದರಿಂದ ವಿದ್ಯಾರ್ಥಿಗಳಿಗೆ ‘ ಸ್ವ -ಗೃಹನಿರ್ಬಂಧ’ ದ ( ಕ್ಯಾರೆಂಟೈನ್ ) ವೇಳೆ ತರಗತಿಯನ್ನು ಮಿಸ್ ಮಾಡಿಕೊಳ್ಳುವ ಪ್ರಮೇಯವೇ ಬಾರದು. ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್. ಸಪ್ನಾ, ಸಂಪರ್ಕಕ್ಕೆ ತಂತ್ರಜ್ಞಾನವನ್ನು ಬಳಸಬೇಕು. ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಲು ಶಿಕ್ಷಣ ತಜ್ಞರು ಬಳಸುವ ವಿವಿಧ ರೀತಿಯ ಅಪ್ಲಿಕೇಶನ್‌ಗಳಿವೆ.ಆ್ಯಪ್ ಬಳಕೆಯಿಂದ ವಿದ್ಯಾರ್ಥಿಗಳು ಸಹ ಸಂತೋಷವಾಗಿದ್ದಾರೆ . ಸುಲಭವಾಗಿ ಕೆಲಸ ಮಾಡಲು ನಿಗದಿತ ಸಮಯದಲ್ಲಿ ತರಗತಿಗೆ ಹಾಜರಾಗಬಹುದು. ಶಿಕ್ಷಕರಾಗಿ ನಾವು ಈ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇಂದಿನಿಂದ ಪ್ರತಿದಿನ ನಾವು 1 ಗಂಟೆ ತರಗತಿಗಳನ್ನು ನಡೆಸುತ್ತೇವೆ ಎಂದರು. : ---. -- : . . . . 8 10 . . . . . . . . … 1 . . , .