ಕೋವಿಡ್ -19 : ಮೈಸೂರಲ್ಲಿ 3 ನೇ ವ್ಯಕ್ತಿಗೆ ದೃಢ, ‘ ಸ್ವ- ಗೃಹನಿರ್ಬಂಧ’ ದಲ್ಲಿ 8 ಮಂದಿ. ಮೈಸೂರು, ಮಾ.26, 2020 : (.. ) ಜಿಲ್ಲೆಯಲ್ಲಿ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಕಾಯಿಲೆ ದೃಢಪಟ್ಟಿದ್ದು, ಇವರು ಯಾವುದೇ ವಿದೇಶ ಪ್ರವಾಸದ ಹಿನ್ನೆಲೆ ಹೊಂದಿಲ್ಲ. ಆದರು ಕೊರೋನಾ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿರುವುದಿಷ್ಟು… ನಂಜನಗೂಡಿನಲ್ಲಿ ಔಷಧ ಉತ್ಪಾದನಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವ್ಯಕ್ತಿ, ಈತನಕ ಯಾವುದೇ ಸೋಂಕಿತರ ಸಂಪರ್ಕಕ್ಕೆ ಬಂದಿರಲಿಲ್ಲ. ಇವರ ನೇರ ಸಂಪರ್ಕಕ್ಕೆ ಬಂದ 8 ಜನರನ್ನು ‘ ಸ್ವ ಗೃಹ ನಿರ್ಬಂಧ’ ( ಹೋಂಕ್ವಾರೆಂಟೇನ್ ) ಮಾಡಲಾಗಿದೆ.ಇದುವರೆಗೂ ವಿದೇಶ ಪ್ರವಾಸದಿಂದ ಬಂದವರಲ್ಲಿ ಮಾತ್ರವೇ ಕೋವಿಡ್ ಕಾಯಿಲೆ ಕಂಡು ಬಂದಿತ್ತು. ಆದರೆ, ಈಗ ಯಾವುದೇ ಪ್ರಯಾಣ ನಡೆಸದವರಲ್ಲಿಯೂ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. : 3rd P52 3rd 35 , . , , , . . . 7 .