ಮೈಸೂರಿನಲ್ಲಿ ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ದೃಢ… ಬೆಂಗಳೂರು,ಮಾ,21,2020(..): ಮಾರಕ ಕರೋನಾ ವೈರಸ್ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಾಲಿಟ್ಟಿದೆ. ಮೈಸೂರಿನಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಕುರಿತು ಕೋಲಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಇಂದು ಒಂದೇ ದಿನ ಐವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಮೂರು, ಗೌರಿಬಿದನೂರಿನಲ್ಲಿ ಒಂದು, ಮೈಸೂರಿನಲ್ಲಿ ಒಂದು ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ದುಬೈಗೆ ತೆರಳಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ. ಈತ ದುಬೈನಿಂದ ಗೋವಾಗೆ ಬಂದು ಗೋವಾದಿಂದ ಬೆಂಗಳೂರಿಗೆ ನಂತರ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದನು. ಈಗ ಈ ವ್ಯಕ್ತಿಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಇಂದು ಒಂದೇ ದಿನ ಐವರು ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢ ಪಟ್ಟು 20ಕ್ಕೆ ಏರಿಕೆಯಾಗಿದೆ. : - – - - - - .