ಸೌದೆ ತರಲು ಮನೆಯಿಂದ ಹೊರ ಹೋಗಿದ್ದ ಮಹಿಳೆಗೆ ಎದುರಾಯ್ತು ಆಪತ್ತು….. ಮೈಸೂರು,ಮಾ,21,2020(..): ಸೌದೆ ತರಲು ಹೊರ ಹೋಗಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹದೇವಮ್ಮ ಗಾಯಗೊಂಡ ಮಹಿಳೆ. ಮಹದೇದೇವಮ್ಮ ಸೌದೆ ತರಲು ಮನೆಯಿಂದ ಹೊರಬಂದಿದ್ದರು. ಇದೇ ವೇಳೆ ಆಹಾರ ಅರಸಿ ಒಂಟಿಸಲಗ ಚಿಕ್ಕದೇವಮ್ಮ ಬೆಟ್ಟದಿಂದ ಕಲ್ಲಂಬಾಳು ಗ್ರಾಮಕ್ಕೆ ಲಗ್ಗೆ ಇಟ್ಟಿತ್ತು. ಈ ಸಮಯದಲ್ಲಿ ಕಾಡಾನೆ ಮಹದೇವಮ್ಮ ಅವರ ಮೇಲೆ ದಾಳಿ ನಡೆಸಿದ್ದು ಗಾಯಾಳು ಮಹದೇವಮ್ಮಗೆ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. : ---