ಪ್ರಯಾಣಿಕರ ಗಮನಕ್ಕೆ: ಕೊರೋನಾ ಭೀತಿ ಹಿನ್ನೆಲೆ ಮೈಸೂರು ರೈಲ್ವೆ ಕಚೇರಿ ಕೈಗೊಂಡಿದೆ ಈ ಮುನ್ನೆಚ್ಚರಿಕಾ ಕ್ರಮ… ಮೈಸೂರು,ಮಾ,21,2020(..): ಪ್ರಪಂಚದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು ದೇಶದಲ್ಲೂ ತೀವ್ರ ಆತಂಕ ಸೃಷ್ಠಿಸಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಮೈಸೂರಿನ ರೈಲ್ವೆ ಕಚೇರಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಪ್ರಯಾಣಿಕರು ಇದನ್ನ ಪಾಲಿಸಬೇಕಿದೆ. ಕೊರೋನಾ ಹರಡುವ ಆತಂಕ ಹಿನ್ನೆಲೆ, ಮೈಸೂರು ರೈಲ್ವೆ ಕಚೇರಿಯು ರೈಲು ನಿಲ್ದಾಣದ ಟಿಕೆಟ್ ಕೌಂಟರ್ ನಲ್ಲಿ ಪ್ರಯಾಣಿಕರ ಮಧ್ಯೆ ಅಂತರ ಕಾಯ್ದುಕೊಳ್ಳಲು ಪ್ರತಿ 1 ಮೀ. ಅಂತರದಲ್ಲಿ ಕೆಂಪು ಪಟ್ಟಿ ರಚಿಸಿದೆ. ಈ ಕೆಂಪು ಪಟ್ಟಿಯಲ್ಲಿ ನಿಂತು ಪ್ರಯಾಣಿಕರು ಟಿಕೆಟ್ ಪಡೆಯಬೇಕಿದೆ. ಇನ್ನು ರೈಲ್ವೆ ನಿಲ್ದಾಣದ 1ನೇ ಪ್ಲಾಟ್ಫಾರ್ಮ್ ನಲ್ಲಿ ‘ಕೋವಿಡ್-19 ಸಹಾಯ ವಾಣಿ ಆರಂಭಿಸಿದ್ದು, ರೈಲ್ವೆ ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ. : - - - -