ನಿರ್ಭಯಾ ಹಂತಕರ ನೇಣಿಗೇರಿಸಿದ ಹ್ಯಾಂಗ್ ಮನ್ ಗೆ ಒಂದು ಲಕ್ಷ ದೇಣಿಗೆ ನೀಡಿದ ಜಗ್ಗೇಶ್ ಬೆಂಗಳೂರು, ಮಾರ್ಚ್ 20, 2020 (..): ನಿರ್ಭಯ ಹಂತಕರ ಗಲ್ಲಿಗೇರಿಸಿದ ಹ್ಯಾಂಗ್ ಮನ್ ಗೆ ನಟ ನವರಸನಾಯಕ ಜಗ್ಗೇಶ್ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಅವರು ನಿರ್ಭಯಾ ಹಂತಕರ ನೇಣಿಗೇರಿಸಿದ ಹ್ಯಾಂಗ್ ಮನ್ ಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಅಪರಾಧಿಗಳಿಗೆ ಇಂದು ಬೆಳಗಿನ ಜಾವ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿದೆ. ಈ ದಿನಕ್ಕಾಗಿ ಹಲ್ಲುಕಚ್ಚಿ ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ದೆ ಮಾಡದೇ ಕಾದೆ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪುವುದಿಲ್ಲ. ಸತ್ಯದ ಹಾದಿಯಲ್ಲಿ ನಡೆದವರಿಗೆ ಭಯವಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.