ಕೊರೋನಾ ಸೋಂಕಿಗೆ ದೇಶದಲ್ಲಿ ನಾಲ್ಕನೇ ಬಲಿ… ನವದೆಹಲಿ,ಮಾ,19,2020(..): ಚೀನಾದಲ್ಲಿ ಆರಂಭಗೊಂಡ ಮಹಾಮಾರಿ ಕೊರೋನಾ ವೈರಸ್ ಇದೀಗ ವಿಶ್ವದ ಎಲ್ಲಾ ರಾಷ್ಟ್ರಗಳ ನಿದ್ದೆಗೆಡಿಸಿದ್ದು ಈ ನಡುವೆ ಇದರ ಅಟ್ಟಹಾಸ ಭಾರತದಲ್ಲೂ ಮುಂದುವರೆದಿದೆ. ಭಾರತದಲ್ಲಿ ಕೊರೋನಾ ವೈರಸ್ ಸೋಂಕಿಗೆ 4ನೇ ಬಲಿಯಾಗಿದೆ. ಪಂಜಾಬ್ ನಲ್ಲಿ ಸುಮಾರು 70 ವರ್ಷದ ವೃದ್ಧ ಕೊರೋನಾ ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿ ಕರ್ನಾಟಕ, ಮಹಾರಾಷ್ಟ್ರದ ಬಳಿಕ ಇದೀಗ ಪಂಜಾಬ್ ನಲ್ಲಿ ಕೊರೋನಾ ವೈರಸ್ ಗೆ ಮೊದಲ ಬಲಿಯಾಗಿದೆ. ಪಂಜಾಬ್​ನಲ್ಲಿ ಕೋವಿಡ್​-19 ಸೋಂಕಿತ ವ್ಯಕ್ತಿ ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಗಢದಲ್ಲೂ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕೆಲ ಗಂಟೆಗಳ ಹಿಂದಷ್ಟೇ ಪಂಜಾಬ್​ ಸರ್ಕಾರ ನಿಷೇಧಿಸಿತ್ತು. ದೇಶದಲ್ಲಿ ಈವರೆಗೆ 167 ಮಂದಿಗೆ ಕೊರೋನಾ ಸೋಂಕು ಕಂಡು ಬಂದಿದೆ. : - – - – .