ಸಾಕು ಪ್ರಾಣಿಗಳ ಕೊಂಬು ಸಂಗ್ರಹಣೆ ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳು… ಮೈಸೂರು,ಮಾ,18,2020(..): ಅನಧಿಕೃತವಾಗಿ ಸಾಕುಪ್ರಾಣಿಗಳ ಕೊಂಬು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಗೋದಾಮಿನ ಮೇಲೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಮಾಲೀಕನಿಗೆ ದಂಡ ವಿಧಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ, ಪಶು ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಮೈಸೂರಿನ ಬಿಎಂಶ್ರೀ ನಗರದಲ್ಲಿ ಅಕ್ರಂ ಎಂಬುವವರು ‌ ಅನಧಿಕೃತವಾಗಿ ಗೋದಾಮು ಓಪನ್ ಮಾಡಿದ್ದರು. ಗೋದಾಮಿನಲ್ಲಿ ಸಾಕು ಪ್ರಾಣಿಗಳ ಕೊಂಬುಗಳನ್ನ ಸಂಗ್ರಹಣೆ ಮಾಡಿದ್ದರು. ಯಾವುದೇ ಪರವಾನಗಿ ಪಡೆಯದೆ ಕೊಂಬು ಉತ್ಪನ್ನ ತಯಾರಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಗೋದಾಮಿನ ಮೇಲೆ ದಾಳಿ ನಡೆಸಿ, ಕೊಂಬುಗಳಿಂದ ತಯಾರಿಸಿದ ಬಾಚಣಿಗೆ, ಬಟನ್ಸ್, ಆಟಿಕೆ ವಸ್ತುಗಳನ್ನ ವಶಪಡಿಸಿಕೊಂಡಿದೆ. ಹಾಗೆಯೇ ಗೋದಾಮು ಮಾಲೀಕ ಅಕ್ರಂಗೆ ಅಧಿಕಾರಿಗಳು ಹತ್ತು ಸಾವಿರ ರೂ ದಂಡ ವಿಧಿಸಿದ್ದಾರೆ. : - - - –- -