ವಿದೇಶದಲ್ಲಿರುವ 276 ಭಾರತೀಯರಿಗೆ ಕೊರೋನಾ ಸೋಂಕು: ಕೇಂದ್ರದಿಂದ ಪಟ್ಟಿ ಬಿಡುಗಡೆ… ನವದೆಹಲಿ,ಮಾ,18,2020(..): ಕೊರೋನಾ ವೈರಸ್ ಹಾವಳಿಗೆ ಪ್ರಪಂಚವೇ ತತ್ತರಿಸುತ್ತಿದ್ದು ಈ ನಡುವೆ ವಿದೇಶದಲ್ಲಿರುವ 276 ಮಂದಿ ಭಾರತೀಯರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿದೇಶದಲ್ಲಿರುವ ಭಾರತೀಯ ಕೊರೋನಾ ಸೋಂಕಿತರ ಪಟ್ಟಿಯನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ವಿದೇಶದಲ್ಲಿರುವ 276 ಮಂದಿ ಭಾರತೀಯರಿಗೆ ಕೊರೋನಾ ಪತ್ತೆಯಾಗಿದೆ. ಇದರಲ್ಲಿ ಇರಾನ್ ನಲ್ಲಿರುವ 255 ಭಾರತೀಯರಲ್ಲಿ, ಯುಎಇನಲ್ಲಿ 12 ಮಂದಿಗೆ, ಇಟಲಿಯಲ್ಲಿ 5 ಮಂದಿಗೆ ಶ್ರೀಲಾಂಕಾ, ಕುವೈತ್ , ಹಾಂಕಾಂಗ್ , ರವಾಂಡದಲ್ಲಿ ತಲಾ ಒಬ್ಬ ಭಾರತೀಯನಿಗೆ ಕೊರೋನಾ ಸೋಂಕಿರುವುದನ್ನ ಕೇಂದ್ರ ಸರ್ಕಾರ ದೃಢಪಡಿಸಿದೆ. ಇನ್ನು ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. ನವದೆಹಲಿ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಮೂರು ಮಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಈ ನಡುವೆ ನಮ್ಮ ರಾಜ್ಯದಲ್ಲಿ ಒಟ್ಟು 14 ಮಂದಿಗೆ ಕೊರೋನಾ ಹರಡಿರುವುದು ದೃಢಪಟ್ಟಿದೆ. : –- 276 - - – –