‘ಕಮ್ ‍ ಬ್ಯಾಕ್ ರಶ್ಮಿಕಾ’ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಮಾಡಿದ ಫ್ಯಾನ್ಸ್ ! ಬೆಂಗಳೂರು, ಮಾರ್ಚ್ 17, 2020 (..):ಇತ್ತೀಚೆಗೆ ರಶ್ಮಿಕಾ ತಮ್ಮ ಟ್ವಿಟ್ಟರಿನಿಂದ ದೂರ ಉಳಿದುಕೊಂಡಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಮಾರ್ಚ್ 7 ರಂದು ರಶ್ಮಿಕಾ ಕೊನೆಯದಾಗಿ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಅವರು ಯಾವುದೇ ಟ್ವೀಟ್ ಮಾಡಿಲ್ಲ . ರಶ್ಮಿಕಾ ಒಂದು ವಾರದಿಂದ ಟ್ವಿಟ್ಟರ್ ಬಳಸುತ್ತಿಲ್ಲ. ಇದನ್ನು ಗಮನಿಸಿದ ಅಭಿಮಾನಿಗಳು ‘ಕಮ್ ‍ ಬ್ಯಾಕ್ ರಶ್ಮಿಕಾ’ ಎಂಬ ಹ್ಯಾಶ್ ‍ ಟ್ಯಾಗ್ ಬಳಸಿ ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಯ ಟ್ವೀಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.