‘ಬಿಗ್ ಬಾಸ್’ ಮೋಹನ್ ಲಾಲ್ ವಿರುದ್ಧ ಸೈಬರ್ ದಾಳಿ ಬೆಂಗಳೂರು, ಮಾರ್ಚ್ 17, 2020 (..):ಮೋಹನ್ ಲಾಲ್ ವಿರುದ್ಧ ಸೈಬರ್ ದಾಳಿ ನಡೆಸಲಾಗಿದೆ. ಮಲಯಾಳದ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 2ನಿಂದ ಸ್ಪರ್ಧಿ ಡಾ.ರಜಿತ್ ಕುಮಾರ್‌ ಅವರನ್ನು ಹೊರ ಹಾಕಿದ್ದಕ್ಕೆ ರಜಿತ್ ಅಭಿಮಾನಿಗಳು ಬಿಗ್‌ಬಾಸ್ ನಿರೂಪಕ ಮೋಹನ್ ಲಾಲ್ ವಿರುದ್ಧ ಸೈಬರ್ ದಾಳಿ ನಡೆಸಿದ್ದಾರೆ. ಮಾರ್ಚ್ 10ರಂದು ಪ್ರಸಾರವಾದ ಬಿಗ್‌ಬಾಸ್‌ನ 66ನೇ ಕಂತಿನ ‘ಸ್ಕೂಲ್ ಟಾಸ್ಕ್’ನಲ್ಲಿ ಸ್ಪರ್ಧಿ ರಜಿತ್, ಸಹಸ್ಪರ್ಧಿ ರೇಷ್ಮಾಳ ಕಣ್ಣಿಗೆ ಖಾರದ ಪುಡಿ ಹಚ್ಚಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಕಣ್ಣಿಗೆ ಸೋಂಕು ತಗಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದ ರೇಷ್ಮಾಳೊಂದಿಗೆ ರಜಿತ್ ಈ ರೀತಿ ನಡೆದುಕೊಂಡಿದ್ದಕ್ಕೆ ತೀವ್ರ ಆಕ್ಷೇಪವ್ಯಕ್ತವಾಗಿತ್ತು. ಮೋಹನ್ ಲಾಲ್ ಕೂಡ ರಜಿತ್ ಕೃತ್ಯವನ್ನು ಖಂಡಿಸಿದ್ದು, ಬಿಗ್‌ಬಾಸ್ ನಿಯಮ ಉಲ್ಲಂಘನೆ ವಿರುದ್ಧ ಟೀಕಿಸಿದ್ದರು. ಪ್ರಬಲ ಸ್ಪರ್ಧಿ ರಜಿತ್‌ ಹೊರಗೆ ಕಳಿಸಿದ್ದಕ್ಕೆ ಅವರ ಅಭಿಮಾನಿಗಳು ಮೋಹನ್ ಲಾಲ್ ವಿರುದ್ಧ ಕಿಡಿಕಾರಿದ್ದರು.