ತೋಳ ದಾಳಿಯಿಂದಾಗಿ ಹತ್ತು ಜನರಿಗೆ ಗಾಯ: ಗ್ರಾಮಸ್ಥರಲ್ಲಿ ಆತಂಕ… ಕೊಪ್ಪಳ,ಮಾ,14,2020(..): ತೋಳ ದಾಳಿ ನಡೆಸಿದ ಪರಿಣಾಮ ಹತ್ತು ಜನರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ ತೋಳ ದಾಳಿ ಮಾಡಿದ್ದು ಈ ವೇಳೆ ಮಹಿಳೆಯರು ವೃದ್ದರು ಸೇರಿದಂತೆ ಹತ್ತು ಜನರನ್ನು ಮುಖ. ತಲೆ. ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾದರು. ಹಾಗೆಯೇ ತೋಳ ದಾಳಿಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ತೋಳವನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದಾರೆ. ತೋಳ ದಾಳಿಯಿಂದ ಗಾಯಗೊಂಡವರನ್ನು ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. :- - – -