ಕೊರೊನಾ ಎಫೆಕ್ಟ್: ಭಾರತ-ದ.ಆಫ್ರಿಕಾ ಏಕದಿನ ಸರಣಿ ರದ್ದು ಬೆಂಗಳೂರು, ಮಾರ್ಚ್ 14, 2020 (..): ಕೊರೋನಾವೈರಸ್ ನಿಂದಾಗಿ ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದಾಗಿದೆ. ಮೊದಲ ಪಂದ್ಯ ಏಕದಿನ ಮಳೆಯಿಂದಾಗಿ ರದ್ದಾಗಿತ್ತು. ಉಳಿದ ಎರಡು ಏಕದಿನ ಪಂದ್ಯ ಲಕ್ನೋ ಮತ್ತು ಕೋಲ್ಕೊತ್ತಾದಲ್ಲಿ ನಡೆಯಬೇಕಿತ್ತು. ಮೊದಲಿಗೆ ಈ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಆಫ್ರಿಕಾ ಕ್ರಿಕೆಟಿಗರು ಸರಣಿ ಮುಂದುವರಿಸಲು ಹಿಂದೇಟು ಹಾಕಿದ್ದಾರೆ. ಕೊರೋನಾ ಭೀತಿ ತಗ್ಗಿದ ಮೇಲೆ ಉಳಿದ ಪಂದ್ಯಗಳನ್ನು ಆಡಲು ಮತ್ತೆ ಆಫ್ರಿಕಾ ಕ್ರಿಕೆಟಿಗರು ಭಾರತಕ್ಕೆ ಬರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.