ಕೊರೋನಾ ಎಫೆಕ್ಟ್: ಐಪಿಎಲ್ ಟೂರ್ನಿ ಮುಂದೂಡಿಕೆ… ಮುಂಬೈ,ಮಾ,13,2020(..): ಕರೋನಾ ವೈರಸ್ ಭೀತಿಯ ಎಫೆಕ್ಟ್ ಎಲ್ಲಾ ಕ್ಷೇತ್ರಗಳಿಗೂ ತಟ್ಟಿದ್ದು ಇದೀಗ ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ ಗೂ ಕೊರೋನಾ ವೈರಸ್ ಭೀತಿ ಎದುರಾಗಿದೆ. ಈ ಹಿನ್ನೆಲೆ ಐಪಿಎಲ್ ಟೂರ್ನಿಯನ್ನ ಮುಂದೂಡಲಾಗಿದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಮತ್ತು ಟೂರ್ನಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು ಏಪ್ರಿಲ್ 15ಕ್ಕೂ ಟೂರ್ನಿಯನ್ನು ಮುಂದೂಡಲಾಗಿದೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿ ತಂಡಗಳಿಗೂ ಮಾಹಿತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ. ಇದೇ ತಿಂಗಳ 29ರಂದು ಐಪಿಎಲ್ ಟೂರ್ನಿ ಆರಂಭವಾಗಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಟೂರ್ನಿ ಮುಂದೂಡಲಾಗಿದೆ. : - - -