ನಾಳೆ ಏನಿರುತ್ತೆ..? ಏನಿರೋಲ್ಲಾ..? ಕರೊನಾ ವೈರಸ್ ಕುರಿತು ಸಿಎಂ ಬಿಎಸ್ ವೈ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು ಗೊತ್ತೆ..? ಬೆಂಗಳೂರು,ಮಾ,13,2020(..): ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ನಾಳೆಯಿಂದ ಒಂದು ವಾರಗಳ ಕಾಲ ಮಾಲ್ ಗಳು ಸಿನಿಮಾ, ಥಿಯೇಟರ್ ಗಳು, ಕಾಲೇಜುಗಳು ವಿವಿಗಳನ್ನ ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ ರಾಜ್ಯದಲ್ಲಿ ಎಲ್ಲಾ ಬಂದ್ ಆಗಲ್ಲ ದಿನನಿತ್ಯ ಸೇವೆಗಳು ಎಂದಿನಂತೆ ಇರುತ್ತವೆ ನಾಳೆ ಯಥಾ ಪ್ರಕಾರ ರೈಲು ವಿಮಾನ, ಬಸ್ ಸಂಚಾರವಿರುತ್ತದೆ. ಎಂದಿನಂತೆ ಬ್ಯಾಂಕ್, ಅಂಗಡಿಗಳು ತೆರೆದಿರುತ್ತವೆ. ಮೆಡಿಕಲ್ ಸ್ಟೋರ್. ಆಸ್ಪತ್ರೆಗಳು ಓಪನ್ ಆಗಿರುತ್ತವೆ. ಇನ್ನು ತರಕಾರಿ ಪೇಪರ್ ಹಾಲು ಸಹ ಸಿಗುತ್ತದೆ. ದೇವಾಲಯ ಚರ್ಚ್ ಮಸೀದಿಗಳು ಸಹ ತೆರೆದುರುತ್ತದೆ, ದಿನನಿತ್ಯ ಸೇವೆಗಳು ಲಭ್ಯವಿರುತ್ತೆ. ಹೀಗಾಗಿ ಜನರು ಆತಂಕಪಡುವುದು ಬೇಕಾಗಿಲ್ಲ. ಜತೆಗೆ ಬಾರ್ ರೆಸ್ಟೋರೆಂಟ್ ಗಳು ಸಹ ತೆರೆದಿರುತ್ತವೆ. ಕರೊನಾ ವೈರಸ್ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಿಎಂ ಬಿಎಸ್ ವೈ ತಿಳಿಸಿದ ಮುಖ್ಯಾಂಶಗಳು ಹೀಗಿದೆ ನೋಡಿ… : - -- - - -