‘ತೂಗದೀಪ ದರ್ಶನ ‘ ಪುಸ್ತಕದ ಮುಖಪುಟದೊಂದಿಗೆ ಪವರ್ ಸ್ಟಾರ್ ! ಬೆಂಗಳೂರು, ಮಾರ್ಚ್ 12, ಮಾರ್ಚ್ 2020 (..): ದರ್ಶನ್ ಬಗ್ಗೆ ಗೊತ್ತಿಲ್ಲದ ವಿಚಾರಗಳನ್ನು ತಿಳಿಸಲು ಪತ್ರಕರ್ತ ವಿನಾಯಕರಾಮ್ ಕಲಗಾರು ‘ತೂಗುದೀಪ ದರ್ಶನ ‘ ಪುಸ್ತಕವನ್ನು ಬರೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ‍ ಕುಮಾರ್ ಅವರು ‘ತೂಗದೀಪ ದರ್ಶನ’ ಪುಸ್ತಕದ ಮುಖಪುಟ ಬಿಡುಗಡೆ ಮಾಡಿದ್ದಾರೆ. ದರ್ಶನ್ ಜೊತೆಗೆ ತಂದೆ ತೂಗುದೀಪ ಶ್ರೀನಿವಾಸ್ , ತಾಯಿ ಮೀನಾ , ಸಹೋದರ ದಿನಕರ್ ಅವರ ಫೋಟೋಗಳಿರುವ ಈ ಮುಖಪುಟ ಆಕರ್ಷಕವಾಗಿದೆ . ಮುಖಪುಟವನ್ನು ಬಿಡುಗಡೆ ಮಾಡುವ ವೇಳೆ ಪುನೀತ್ ಅವರು ತೂಗುದೀಪ ಶ್ರೀನಿವಾಸ್ ಅವರ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ.