ದಾವಣಗೆರೆ ಕ್ಷೇತ್ರದಿಂದ ಜಿ.ಎಂ ಸಿದ್ಧೇಶ್ವರ್ ಪತ್ನಿಗೆ ಟಿಕೆಟ್: ಎಂ.ಪಿ ರೇಣುಕಾಚಾರ್ಯ ಕೆಂಡಾಮಂಡಲ. ದಾವಣಗೆರೆ, ಮಾರ್ಚ್,14,2024(..):ನಿನ್ನೆ ಬಿಜೆಪಿ ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಿದ್ದು ಈ ನಡುವೆ ದಾವಣಗೆರೆ ಕ್ಷೇತ್ರದಿಂದ ಜಿ.ಎಂ ಸಿದ್ದೇಶ್ವರ್ ಅವರ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಎಂ.ಪಿ ರೇಣುಕಾಚಾರ್ಯ, ಸಿದ್ದೇಶ್ವರ್ 20 ವರ್ಷ ಸಂಸದನಾಗಿ ಈತನ ಸಾಧನೆ ಏನಿದೆ. ದಾವಣಗೆರೆಯಲ್ಲಿ ನಾನೊಬ್ಬನೇ ಗಂಡಸು ಎಂಬ ವರ್ತನೆ ಅವರಿಗಿದೆ. ಜಿಎಂ ಸಿದ್ದೇಶ್ವರ್ ಒಂದು ರೀತಿ ಸದ್ದಾಂ ಹುಸೇನ್. ಹೀಗಾಗಿ ಅವರ ಕುಟುಂಬಕ್ಕೆ ಟಿಕೆಟ್ ಬೇಡ ಈಗಲೂ ಟಿಕೆಟ್ ವಾಪಸ್ ಪಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ, ಸರ್ವೆಯಲ್ಲಿಯೂ ಕೂಡ ಸಂಸದ ಸಿದ್ದೇಶ್ವರ ಕುಟುಂಬದ ಹೆಸರಿಲ್ಲ. ಸರ್ವೆ ಸಂಪೂರ್ಣ ಸಂಸದ ಸಿದ್ದೇಶ್ವರ್​ ವಿರುದ್ಧ ಬಂದಿದೆ. ಗೂಂಡಾಗಳನ್ನ ಇಟ್ಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ಕೂಡಲೇ ಹಾಲಿ ಸಂಸದರ ಕುಟುಂಬಕ್ಕೆ ನೀಡಿದ ಟಿಕೆಟ್ ಹಿಂಪಡೆಯಲಿ ಎಂದು ಆಗ್ರಹಿಸಿದರು. : - - – -