ಈ ಬಾರಿ ತುಮಕೂರು ಕ್ಷೇತ್ರದಿಂದ ನಾನು ಗೆದ್ದೇ ಗೆಲ್ಲುತ್ತೇನೆ- ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿಶ್ವಾಸ. ಬೆಂಗಳೂರು,ಮಾರ್ಚ್,14,2024(..):ತುಮಕೂರು ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನ ಅಭ್ಯರ್ಥಿಯ ಬಗ್ಗೆ ನನಗೇನು ಆತಂಕ ಇಲ್ಲ ಈ ಬಾರಿಗೆ ತುಮಕೂರಿಂದ ಗೆದ್ದೆ ಗೆಲ್ಲುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ, ತುಮಕೂರಿಂದ ನನಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಗೆಲುವಿಗೆ ಯಡಿಯೂರಪ್ಪ, ವಿಜಯೇಂದ್ರ ಅವರ ಸಹಕಾರ ಕೋರಿದ್ದೇನೆ. ಬಿಎಸ್ ವೈ ನನ್ನ ಪರವಾಗಿ ಅಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಳೆ ತುಮಕೂರಿಂದ ಅಧಿಕೃತ ಪ್ರಚಾರ ಶುರು ಮಾಡುತ್ತೇನೆ ಎಂದರು. ಮಾಜಿ ಸಚಿವ ಮಾಧುಸ್ವಾಮಿ ಜೊತೆಗೂ ನಾನು ಮಾತಾಡುತ್ತೇನೆ. ಮಾಧುಸ್ವಾಮಿ ನಾವೆಲ್ಲರೂ ಒಂದೇ. ಮಾಧುಸ್ವಾಮಿ ನನ್ನ ಗೆಳೆಯ, ನನಗೆ ಅವರು ಸಪೋರ್ಟ್ ಮಾಡ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸೋಲನುಭವಿಸಿದ್ದೆ. ಇದನ್ನು ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡು ಕೆಲಸಗಾರ ಮನೆಯಲ್ಲಿ ಕೂರೋದು ಬೇಡ ಅಂತಾ ಟಿಕೆಟ್ ನೀಡಿದೆ ಎಂದು ವಿ.ಸೋಮಣ್ಣ ತಿಳಿಸಿದರು. : – - . -