ಜನರ ಸೇವೆ ಮಾಡಲು ಅವಕಾಶ : ರಾಜ ಅನ್ನೋದು, ಎಸಿ ರೂಂ ಎಲ್ಲವನ್ನು ಬಿಡಬೇಕಾಗುತ್ತೆ-ಬಿಜೆಪಿ ಅಭ್ಯರ್ಥಿ ಯದುವೀರ್. ಬೆಂಗಳೂರು,ಮಾರ್ಚ್,14,2024(..):ನನಗೆ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಸೇವೆ ಮಾಡುತ್ತೇನೆ. ಸಾರ್ವಜನಿಕ ಜೀವನಕ್ಕೆ ಬಂದ್ರೆ ಸಾರ್ವಜನಿಕವಾಗಿ ಇರಬೇಕು. ರಾಜ ಅನ್ನೋದು, ಎಸಿ ರೂಂ ಎಲ್ಲವನ್ನು ಬಿಡಬೇಕಾಗುತ್ತೆ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಬಿಜೆಪಿ ಅಭ್ಯರ್ಥಿ ಯದುವೀರ್ ಭೇಟಿ ನೀಡಿದರು. ಕಚೇರಿಗೆ ಬರಮಾಡಿಕೊಂಡ ಕಾರ್ಯಕರ್ತರು ಆರತಿ ಬೆಳಗಿ ಸ್ವಾಗತ ಕೋರಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು. ನಂತರ ಮಾತನಾಡಿದ ಯದುವೀರ್, ನನಗೆ ತುಂಬಾ ಸಂತೋಷ ಇದೆ. ಕಳೆದ ಒಂದು ವರ್ಷದಿಂದ ರಾಜಕೀಯ ಚರ್ಚೆ ನಡೆಯುತ್ತಾ ಇತ್ತು. ಈಗ ಅದರ ಅವಕಾಶ ಸಿಕ್ಕಿದೆ. ಇಲ್ಲಿ ರಾಜ, ಸಾಮಾನ್ಯ ಜನ ಅನ್ನೋದಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಇಲ್ಲಿ ಎಲ್ಲರೂ ಒಂದೇ ಎಂದು ಅಭಿಪ್ರಾಯಪಟ್ಟರು. 1 ವರ್ಷದ ಹಿಂದಿನಿಂದ ರಾಜಕೀಯಕ್ಕೆ ಬರೋದಕ್ಕೆ ಪ್ಲಾನ್ ಮಾಡಲಾಗಿತ್ತು. ಪ್ರತಾಪ್ ಸಿಂಹ ಜತೆ ಯಾವಾಗಲೂ ಸಂಪರ್ಕದಲ್ಲಿರುತ್ತೇನೆ. ಮೈಸೂರು-ಕೊಡಗು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಯದುವೀರ್ ನುಡಿದರು. : - – –- –