ಬಿಎಸ್ ವೈ ಮತ್ತು ಮಕ್ಕಳು ನಮಗೆ ಮೋಸ ಮಾಡಿದ್ರು- ಮತ್ತೆ ಗುಡುಗಿದ ಕೆ.ಎಸ್ ಈಶ್ವರಪ್ಪ. ಬೆಂಗಳೂರು,ಮಾರ್ಚ್,14,2024(..):ಹಾವೇರಿ ಕ್ಷೇತ್ರದಿಂದ ಪುತ್ರ ಕಾಂತೇಶ್ ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಗುಡುಗಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಕಾಂತೇಶ್ ಗೆ ಟಿಕೆಟ್ ಕೊಡದಂತೆ ಮೋಸ ಮಾಡಿದ್ದೇ ಬಿಎಸ್ ವೈ. ಬಿಎಸ್ ವೈ ಮಾತು ಕೇಳಿ ನನ್ನ ಮಗ ಮೋಸ ಹೋದ. ಬಿಎಸ್ ವೈ ಅಂತವರನ್ನ ಹೇಗೆ ನಂಬೋದು ಹೇಳಿ ಎಂದು ಕಿಡಿಕಾರಿದರು. ಬಿಎಸ್ ವೈ ಮತ್ತು ಮಕ್ಕಳು ನಮಗೆ ಅನ್ಯಾಯ ಮಾಡಿದ್ದಾರೆ. ಸಂಘಟನೆ ವಿರುದ್ದ ಹೋದವನು ನಾನಲ್ಲ. ಲಕ್ಷಾಂತರ ಜನರನ್ನ ಸೇರಿಸಿ ಸಂಘಟನೆ ಮಾಡಿದ್ದೆ. ಶೋಭಾ ಕರಂದ್ಲಾಜೆ ವಿರುದ್ದ ಗೋಬ್ಯಾಕ್ ಚಳುವಳಿ ಮಾಡಿದ್ರು. ಆದರೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಿಸಿದರು. ನನ್ನ ಮಗನಿಗೆ ಟಿಕೆಟ್ ಕೊಡಿಸಲು ಮಾತನಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಸವರಾಜ ಬೊಮ್ಮಾಯಿ ಬಗ್ಗೆ ನಾನು ಮಾತನಾಡೋದಿಲ್ಲ ಸಾಕಷ್ಟು ಜನರಿಗೆ ಅಪ್ಪ ಮಕ್ಕಳು ಮೋಸ ಮಾಡಿದ್ದಾರೆ. ನಾನು ಯಾರನ್ನೂ ಭೇಟಿ ಮಾಡಲ್ಲ. ನನ್ನ ಜನರ ತೀರ್ಮಾನಕ್ಕೆ ನಾನು ಬದ್ದ. ನಾಳೆ ನನ್ನ ಕಾರ್ಯಕರ್ತರ ಸಭೆ ಇದೆ. ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಕೆಎಸ್ ಈಶ್ವರಪ್ಪ ನುಡಿದರು. : - --- - –