ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮೈಸೂರು, ಮಾರ್ಚ್ 11, 2020 (..): ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿದ್ದಾರೆ. ಮೈಸೂರು ತಾಲೂಕು ಭುಗತಹಳ್ಳಿ ಗ್ರಾಮದ ಬಸವಣ್ಣ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರೋ ವರುಣಾ ಕೆರೆಗೆ ನಿನ್ನೆ ಸಂಜೆ ಹಾರಿದ್ದ. ಇಂದು ಬೆಳಗ್ಗೆ ಕೆರೆಯಲ್ಲಿ ಈಜುಗಾರರಿಂದ ಶವ ಪತ್ತೆ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.