ಸಿಸಿಬಿ ಪೊಲೀಸರ ದಾಳಿ: ಅಕ್ರಮವಾಗಿ ಕುದುರೆ ರೇಸ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 8 ಮಂದಿ ಅರೆಸ್ಟ್… ಮೈಸೂರು,ಮಾ,9,2020(..): ಮೈಸೂರು ರೇಸ್ ಕೋರ್ಸ್ ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಕ್ರಮವಾಗಿ ಕುದುರೆ ಜೂಜಾಡುತ್ತಿದ್ದ 8 ಮಂದಿಯನ್ನ ಬಂಧಿಸಿದ್ದಾರೆ. ವಿಶ್ವನಾಥ್, ಹರೀಶ್, ಅಮೀನ್, ಸುನೀಲ್ ಕುಮಾರ್, ಸಿ.ಎನ್ ಪ್ರಕಾಶ್, ಶ್ರೀನಿವಾಸ್, ಶಶಿಕುಮಾರ್, ಶಂಕರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 2,32,910. ರೂ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಸ್ ಕೋರ್ಸ್ ಷರತ್ತುಗಳನ್ನು ಉಲ್ಲಂಘಿಸಿ 8 ಮಂದಿ ಆರೋಪಿಗಳು ಜೂಜಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆ 8 ಮಂದಿಯನ್ನ ಬಂಧಿಸಲಾಗಿದ್ದು, ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - –- – - -.