ಹನಿಮೂನ್ ಜೋಡಿ ಚಂದನ್-ನಿವೇದಿತಾಗೆ ಕೊರೋನಾ ಪರೀಕ್ಷೆ ಮಾಡ್ಸಿ ಎಂದ ನೆಟ್ಟಿಗರು ! ಬೆಂಗಳೂರು, ಮಾರ್ಚ್ 09, 2020 (..):ಹನಿಮೂನ್ ಜೋಡಿ ಚಂದನ್-ನಿವೇದಿತಾಗೆ ಕೊರೋನಾ ಪರೀಕ್ಷೆ ಮಾಡ್ಸಿ ಎಂಬ ಪೋಸ್ಟ್ ಸೋಷಿುಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ! ಸದ್ಯಕ್ಕೆ ಹನಿಮೂನ್ ಮೂಡ್ ನಲ್ಲಿರುವ ನವ ಜೋಡಿ ಆಂಸ್ಟರ್ಡ್ಯಾಮ್, ನೆದರ್ಲ್ಯಾಂಡ್ ಹೀಗೆ ತಮ್ಮ ಪ್ರವಾಸದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಚಂದನ್-ನಿವೇದಿತಾ ವಾಪಾಸ್ ಭಾರತಕ್ಕೆ ಬರುವಾಗ ಅವರಿಗೂ ಕೊರೋನಾ ಪರೀಕ್ಷೆ ಮಾಡಲಾಗುತ್ತದೆಯಾ? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಸಾಕಷ್ಟು ನೆಟ್ಟಿಗರು ಚಂದನ್ ಹಾಗು ನಿವೇದಿತಾಗೆ ಕಾಮೆಂಟ್ ಮೂಲಕ ಕೊರೋನಾ ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡುತ್ತಿದ್ದಾರೆ.