ಸಮೂಹ ಆಚರಣಗಳಿಂದ ದೂರವಿರೋಣ: ಹೋಳಿಹಬ್ಬದ ಶುಭಾಶಯ ತಿಳಿಸಿ ಸಿಎಂ ಬಿಎಸ್ ವೈ ಮನವಿ… ಬೆಂಗಳೂರು,ಮಾ,9,2020(..): ಬಣ್ಣ ಬಣ್ಣಗಳ ರಂಗಿನ ಹಬ್ಬ ಹೋಳಿ ಹಬ್ಬಕ್ಕೂ ಕರೋನಾ ವೈರಸ್ ಎಫೆಕ್ಟ್ ಬೀರಿದ್ದು, ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಸಂದೇಶವೊಂದನ್ನ ಸಾರಿದ್ದಾರೆ. ನಾಡಿನ ಜನತೆಗೆ ಹೋಳಿ ಹಬ್ಬದ ಶುಭ ಕೋರಿರುವ ಸಿಎಂ ಬಿಎಸ್ ಯಡಿಯೂರಪ್ಪ, ಸಾಂಕ್ರಾಮಿಕ ರೋಗದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸಮೂಹ ಆಚರಣಗಳಿಂದ ದೂರವಿರೋಣ ಎಂದು ಜನತೆಗೆ ಸಲಹೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸಿಎಂ ಬಿಎಸ್ ವೈ, ನಾಡಿನ ಸಮಸ್ತ ಜನರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬಣ್ಣದ ಓಕುಳಿಯ ರಂಗು ನಮ್ಮೆಲ್ಲರ ಬಾಳನ್ನು ಅರ್ಥಪೂರ್ಣವಾಗಿ ತುಂಬಲಿ. ಬಣ್ಣ ಮೈಮೇಲಿರುವುದಕ್ಕಿಂತ ಮುಖ್ಯವಾಗಿ ಬದುಕಿನಲ್ಲಿರಲಿ. ಸುರಕ್ಷಿತ ಆಚರಣೆಗೆ ಮಹತ್ವ ಕೊಡೋಣ. ಸಾಂಕ್ರಾಮಿಕ ರೋಗದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸಮೂಹ ಆಚರಣೆಗಳಿಂದ ದೂರವಿರೋಣ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. : – - - -