ಇನ್‍ಸ್ಟಾಗ್ರಾಂ ಖಾತೆ ತೆರೆದ ಕರೀನಾ ! ಫ್ಯಾನ್ಸ್ ಫುಲ್ ಖುಷ್ ! ಬೆಂಗಳೂರು, ಮಾರ್ಚ್ 09, 2020 (..):ಕರೀನಾ ಕಪೂರ್ ಖಾನ್ ಇನ್‍ಸ್ಟಾಗ್ರಾಂಗೆ ಎಂಟ್ರಿಯಾಗಿದ್ದಾರೆ! ಹೌದು. ಕರೀನಾ ಇನ್‍ಸ್ಟಾಗ್ರಾಂ ಖಾತೆ ತೆರೆದು ತನ್ನ ಮೊದಲ ಫೋಟೋದೊಂದಿಗೆ ಫ್ಯಾನ್‍ ಮತ್ತು ಫಾಲೋವರ್ಸ್’ಗಳಿಗೆ ಗಿಫ್ಟ್ ನೀಡಿದ್ದಾರೆ. ಕರೀನಾ ಸಾಮಾಜಿಕ ಜಾಲತಾಣಕ್ಕೆ ಸೇರ್ಪಡೆಯಾಗಿರುವುದನ್ನು ಅಭಿಮಾನಿಗಷ್ಟೇ ಅಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಸ್ವಾಗತಿಸಿದ್ದಾರೆ. ಸಹೋದರಿ ಮತ್ತು ನಟಿ ಕರಿಷ್ಮಾ ಕಪೂರ್ ಕೂಡ ತನ್ನ ಸಹೋದರಿಯ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾರೆ. ಕರೀನಾ ಮೊನ್ನೆಯಷ್ಟೇ ತನ್ನ ಮೊದಲ ಟೀಸರ್ ವಿಡಿಯೋದಲ್ಲಿ ನಾನು ಶೀಘ್ರ ಬರಲಿದ್ದೇನೆ ಎಂದು ಇನ್‍ಸ್ಟಾಗ್ರಾಂ ಸೇರ್ಪಡೆ ಬಗ್ಗೆ ಮುನ್ಸೂಚನೆ ನೀಡಿದ್ದರು.