ಹೆಚ್.ಡಿಕೆ, ಹೆಚ್.ಡಿಡಿ ಮತ್ತು ಮೋದಿ ಅವರ ಸಾಧನೆ ಮೇಲೆ ಚುನಾವಣೆಯಾಗಲಿ-ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಬೆಂಗಳೂರು,ಮಾರ್ಚ್,14,2024(..):ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ತಾವು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಹಿನ್ನೆಲೆ ಈ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ನಾನು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದೇನೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ನಾವು ಯಾರನ್ನೂ ಟೀಕೆ ಮಾಡುವುದಿಲ್ಲ. ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಮೇಲೆ ಚುನಾವಣೆಯಾಗಲಿ. ಸಾಧನೆ ಮಾತನಾಡಬೇಕು ಮಾತು ಸಾಧನೆ ಆಗಬಾರದು ಎಂದರು. ಈ ಚುನಾವಣೆಯಲ್ಲಿ ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ.ಸಿಎನ್ ಮಂಜುನಾಥ್. ತಿಳಿಸಿದರು. : - – - - – -.