ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕನ್ನಡಿಗ ಸುನೀಲ್ ಜೋಶಿ ಆಯ್ಕೆ… ಮುಂಬೈ,ಮಾ,4,2020(..): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕನ್ನಡಿಗ ಸುನೀಲ್ ಜೋಶಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಂದು ಬಿಸಿಸಿಐ ನೇಮಿತ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ), ಕರ್ನಾಟಕದ ಸುನೀಲ್ ಜೋಶಿ ಹೆಸರನ್ನು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದೆ. ಹಾಗೆಯೇ ಮಾಜಿ ವೇಗದ ಬೌಲರ್ ಹರ್ವಿಂಧರ್ ಸಿಂಗ್ ಅವರಿಗೆ ಆಯ್ಕೆ ಸಮಿತಿಯಲ್ಲಿ ಕೇಂದ್ರ ವಲಯದ ಆಯ್ಕೆಗಾರನಾಗಿ ಸ್ಥಾನ ನೀಡಲಾಗಿದೆ. ಇನ್ನುಂದೆ ಆಟಗಾರರ ಆಯ್ಕೆ ಹೊಣೆಗಾರಿಕೆ ಕನ್ನಡಿಗ ಸುನೀಲ್ ಜೋಶಿ ಅವರ ಮೇಲಿದೆ. ಸುನೀಲ್ ಜೋಶಿ ಅವರು ಭಾರತ ಪರ 15 ಟೆಸ್ಟ್ ಪಂದ್ಯಗಳು ಮತ್ತು 69 ಏಕದಿನ ಪಂದ್ಯಗಳನ್ನಾಡಿದ್ದಾರೆ. : - – – - -