‘ಲಂಚ’ ಕುರಿತು ಶಾಸಕ ಹೆಚ್.ಕೆ ಪಾಟೀಲ್ ಹೇಳಿಕೆಗೆ ಸಿಎಂ ಬಿಎಸ್ ವೈ ಸಹಮತ.. ಬೆಂಗಳೂರು,ಮಾ,4,2020(..): ಶೇ 63 ರಷ್ಟು ಅಧಿಕಾರಿಗಳು ಲಂಚ ಪಡೆಯುತ್ತಾರೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ನೀಡಿದ ಹೇಳಿಕೆಗೆ ಸಿಎಂ ಬಿಎಸ್ ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದ್ದಾರೆ. ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಹೆಚ್.ಕೆ ಪಾಟೀಲ್, ಶೇ 63 ರಷ್ಟು ಅಧಿಕಾರಿಗಳು ಲಂಚ ಪಡೆಯುತ್ತಾರೆ. ಇಲ್ಲಿ ಲಂಚ ಕೊಡೋದು ಮತ್ತು ತೆಗೆದುಕೊಳ್ಳೋದು ಕಾಮನ್ ಆಗಿದೆ ಎಂದು ಹೇಳಿದರು. ಶಾಸಕ ಹೆಚ್.ಕೆ ಪಾಟೀಲ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಶೇ.63 ರಷ್ಟು ಅಧಿಕಾರಿಗಳು ಲಂಚ ಪಡೆಯುತ್ತಾರೆಂಬುದು ನೂರಕ್ಕೆ ನೂರರಷ್ಟು ಸತ್ಯ. ಇದರ ಜತೆ ವರ್ಗಾವಣೆ ದಂಧೆ ಹೆಚ್ಚಾಗಿದೆ. ಇದಕ್ಕೆ ಜನಪ್ರತಿನಿಧಿಗಳಾದ ನಾವೆಲ್ಲರೂ ಕಾರಣ. ಇದನ್ನ ಕೊನೆಗಾಣಿಸುವ ಜವಾಬ್ದಾರಿಯೂ ನಮ್ಮದೇ ಆಗಿದೆ ಎಂದು ಹೇಳಿದರು. ಶಾಸಕರು, ಜನಪ್ರತಿನಿಧಿಗಳು ಸಹಕಾರ ಕೊಟ್ಟರೆ ಇವುಗಳನ್ನ ಕೊನೆಗಾಣಿಸಿ ಜನತೆಯ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಬಹುದು ಎಂದು ಸಿಎಂ ಬಿಎಸ್ ವೈ ತಿಳಿಸಿದರು. : - – - ’- –