ಮೈಸೂರಿನಲ್ಲಿ ನಾಯಿಗಳ ದಾಳಿಗೆ ಜಿಂಕೆ ಬಲಿ… ಮೈಸೂರು,ಮಾ,3,2020(..): ಆಹಾರ ಆರಿಸಿ ಬಂದ ಜಿಂಕೆ ನಾಯಿಗಳ ದಾಳಿಗೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡು ತಾಲ್ಲೂಕು ಕೋಣನೂರು ಗ್ರಾಮದ ಹೊರವಲಯದಲ್ಲಿ ರೈತ ಯೋಗೇಶ್ ಜಮೀನಿನಲ್ಲಿ ಈ ಘಟನೆ ನಡೆದಿದೆ. ಜಿಂಕೆ ಕಾಡಿನಿಂದ ಕೋಣನೂರಿಗೆ ಆಹಾರ ಅರಸಿ ಬಂದಿತ್ತು. ಈ ವೇಳೆ ನಾಲ್ಕು ನಾಯಿಗಳು ದಾಳಿ ನಡೆಸಿದ್ದು ಜಿಂಕೆಯನ್ನು ಅಟ್ಟಾಡಿಸಿ ಕಚ್ಚಿ ಕೊಂದು ಹಾಕಿವೆ. ನಾಯಿಗಳ ದಾಳಿ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು ನಾಯಿಗಳ ದಾಳಿಗೆ ತುತ್ತಾಗಿದ್ದ ಜಿಂಕೆಯನ್ನ ರೈತ ಯೋಗೇಶ್ ರಕ್ಷಿಸಲು ಯತ್ನಿಸಿದ್ದಾರೆ. ಈ ವೇಳೆ ನಾಯಿಗಳನ್ನು ಓಡಿಸಿದ್ದು ಅಷ್ಟರಲ್ಲಾಗಲೇ ಜಿಂಕೆತೀವ್ರ ರಕ್ತಸ್ರಾವದಿಂದ‌ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. : - - –