ರಿಷಬ್ ಶೆಟ್ಟಿಯ ‘ಬೆಲ್ ಬಾಟಂ’ ತಮಿಳಿನಲ್ಲಿ ರಿಮೇಕ್ ಬೆಂಗಳೂರು, ಮಾರ್ಚ್ 03, 2020 (..): ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದ ರಿಷಬ್ ಶೆಟ್ಟಿ-ಹರಿಪ್ರಿಯಾ ನಟನೆಯ ‘ಬೆಲ್ ಬಾಟಂ’ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ. ನಿರ್ದೇಶಕ ಸತ್ಯಶಿವ ತಮಿಳಿನಲ್ಲಿ ನಿರ್ದೇಶನ ಮಾಡಲಿದ್ದಾರೆ. ಮಹಿಮಾ ನಂಬಿಯಾರ್ ನಾಯಕಿಯಾಗಲಿದ್ದು, ಹರಿಪ್ರಿಯಾ ಮಾಡಿದ್ದ ಪಾತ್ರ ಮಾಡಲಿದ್ದಾರೆ. ಈ ಬಗ್ಗೆ ಕನ್ನಡದ ಬೆಲ್ ಬಾಟಂ ತಂಡದ ಜತೆ ಮಾತುಕತೆ ನಡೆಯುತ್ತಿದೆಯಂತೆ. ಅಷ್ಟಕ್ಕೂ ತಮಿಳು ರಿಮೇಕ್ ನಲ್ಲಿ ನಾಯಕರಾಗುತ್ತಿರುವವರು ‘ವೀರ’, ‘ಕಳುಗು’ ಸಿನಿಮಾ ಖ್ಯಾತಿಯ ನಟ ಕೃಷ್ಣ.