ಮೈಸೂರಿನಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಪೊಲೀಸರಿಂದ ಅರಿವು… ಮೈಸೂರು,ಫೆ,29,2020(..): ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಮೈಸೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು, ಬೈಕ್​ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಹೆಲ್ಮೆಟ್​​ ಧರಿಸುವಂತೆ ಮನವಿ ಮಾಡಿದ್ದಾರೆ. ಮೈಸೂರಿ‌ನ ಪಾಠ ಶಾಲಾ ಸಿಗ್ನಲ್ ಬಳಿ ಹೆಲ್ಮೆಟ್ ಬಗ್ಗೆ ಕೆ.ಆರ್.ಠಾಣೆ ಪೊಲೀಸರು ವಿನೂತನ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಎಎಸ್ ಐ ಗುರುಸ್ವಾಮಿ ಅವರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಅರಿವು ಮೂಡಿಸಲು ಮುಂದಾದರು. ಹೆಲ್ಮೆಟ್ ಹಾಕುವಂತೆ ಗುಲಾಬಿ ನೀಡಿ ಎಎಸ್‌ಐ ಗುರುಸ್ವಾಮಿ ಮನವಿ ಮಾಡಿದರು. ಎಎಸ್ ಐ ಗುರುಸ್ವಾಮಿ ಅವರಿಗೆ ಸಿಬ್ಬಂದಿಗಳಾದ ಶಿವಕುಮಾರ್, ಸಂತೋಷ ಸಾಥ್ ನೀಡಿದರು. ಗುರುಸ್ವಾಮಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. : - - –-