ಶಾಸಕ ದತ್ತಾತ್ರಯ ಪಾಟೀಲ್ ಗೆ ಮಂತ್ರಿ ಸ್ಥಾನ ನೀಡದಿದ್ರೆ 10 ಶಾಸಕರ ರಾಜೀನಾಮೆ ಕೊಡಿಸ್ತೇನೆ- ಶ್ರೀಶೈಲ ಸಾರಂಗಮಠದ ಸ್ವಾಮೀಜಿ ಎಚ್ಚರಿಕೆ.. ಕಲ್ಬುರ್ಗಿ,ಫೆ,28,2020(..): ಶಾಸಕ ದತ್ತಾತ್ರಯ ಪಾಟೀಲ್ ಗೆ ಮಂತ್ರಿ ಸ್ಥಾನ ನೀಡಬೇಕು. ಇಲ್ಲದಿದ್ರೆ 10 ಶಾಸಕರ ರಾಜೀನಾಮಮೆ ಕೊಡಿಸುತ್ತೇನೆ ಎಂದು ಶ್ರೀಶೈಲ ಸಾರಂಗಮಠದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಶ್ರೀಶೈಲ ಸಾರಂಗಮಠದ ಸಾರಂಗದರ ದೇಶಿ ಸ್ವಾಮೀಜಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶಾಸಕ ದತ್ತಾತ್ರೇಯ ಪಾಟೀಲ್ ಅವರನ್ನು ಮಂತ್ರಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಕೊಟ್ಟ ಭರವಸೆ ಈಡೇರದಿದ್ದರೇ 10 ಮಂದಿ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ನನಗೆ ಕಲ್ಯಾಣ ಕರ್ನಾಟಕ ಭಾಗದ 10 ಶಾಸಕರ ರಾಜೀನಾಮೆ ಕೊಡಿಸುವ ಶಕ್ತಿ ಇದೆ. ಕೊಟ್ಟ ಮಾತಿನಂತೆ ದತ್ತಾತ್ರೆಯ ಪಾಟೀಲ್ ರನ್ನ ಮುಂದಿನ ವರ್ಷದೊಳಗೆ ಮಂತ್ರಿ ಮಾಡಬೇಕು. ಇಲ್ಲದಿದ್ದರೇ 10 ಶಾಸಕರನ್ನ ರಾಜೀನಾಮೆ ಕೊಡಿಸುತ್ತೇನೆ. ರಾಜೀನಾಮೆ ಕೊಟ್ಟು ಕೃಷಿ ಮಾಡಲು ಹೇಳುತ್ತೇನೆ. ಹೀಗೆ ಕೇಳುತ್ತಿರುವುದಕ್ಕೆ ಕಾರಣ ಇದೆ.. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನ ನೀಡಿ ಅವಕಾಶ ಮಾಡಿಕೊಡಬೇಕು ಎಂಬುದಾಗಿದೆ ಎಂದು ಹೇಳಿದರು. : - - -10 - - -