ಸಾವರ್ಕರ್ ಅಷ್ಟು ದೊರೆಸ್ವಾಮಿ ಲಾಠಿ ಏಟು ತಿಂದಿದ್ದಾರಾ? ರಮೇಶ್ ಕುಮಾರ್ ಸತ್ಯಹರಿಶ್ಚಂದ್ರನ ಸಂತತಿಯಂತೆ ಮಾತನಾಡ್ತಾರೆ- ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ… ಚಿತ್ರದುರ್ಗ,ಫೆ,28,2020(..): ಗೂಡ್ಸೆ ಸಂತತಿಯ ಯತ್ನಾಳ್ ಸದನದಲ್ಲಿರಲು ನಾಲಾಯಕ್ ಎಂದಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ರಮೇಶ್ ಕುಮಾರ್ ಸತ್ಯಹರಿಶ್ಚಂದ್ರನ 19ನೇ ಸಂತತಿಯವರಂತೆ ಮಾತನಾಡ್ತಾರೆ. ನನ್ನ ಮೇಲೆ ನೀರಾವರಿ ಹೋರಾಟದ 23 ಕೇಸ್ ಗಳಿವೆ. ನನ್ನ ಮೇಲೆ ಭೂಕಬಳಿಕೆ, ಅತ್ಯಾಚಾರ ನಕಲಿ ನೋಟ್ ಮಾಡಿರುವ ಕೇಸ್ ಗಳಿಲ್ಲ. ಅವರು ಎಷ್ಟು ಭೂಕಬಳಿಕೆ ಮಾಡಿದ್ದಾರೆಂದು ಗೊತ್ತಿದೆ. ಅವರ ಇತಿಹಾಸ ನನಗೆ ಗೊತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು. ಚಿತ್ರದುರ್ಗದಲ್ಲಿ ಇಂದು ಮಾತನಾಡಿ ಎಚ್.ಎ ದೊರೆಸ್ವಾಮಿ ಅವರ ವಿರುದ್ದ ಮತ್ತೆ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಚ್​.ಎಸ್. ದೊರೆಸ್ವಾಮಿ ಯಾವ ವಯಸ್ಸಿನಲ್ಲಿ ಹೋರಾಟ ಮಾಡಿದ್ದರು? ಸಾವರ್ಕರ್ ಅಷ್ಟು ದೊರೆಸ್ವಾಮಿ ಲಾಠಿ ಏಟು ತಿಂದಿದ್ದಾರಾ? ಎಂದು ಪ್ರಶ್ನಿಸಿದರು. ಎಚ್​.ಎಸ್. ದೊರೆಸ್ವಾಮಿ ಆನೆ ಇದ್ದಹಾಗೆ ಎಂಬ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ‘ ಆನೆಯೋ, ಹಂದಿನೋ ಯಾರಿಗೆ ಗೊತ್ತು?. ಪ್ರಧಾನಿ ಮೋದಿ ಮತ್ತು ವೀರ ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಮೊದಲು ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು. ಇನ್ನು ಸಚಿವ ನಾರಾಯಣಗೌಢಡ ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದ್ದನ್ನ ಸಮರ್ಥಿಸಿಕೊಂಡ ಬಸನಗೌಡಪಾಟೀಲ್ ಯತ್ನಾಳ್, ಅವರೇನು ಪಾಕ್ ಗೆ ಜೈ ಎಂದಿದ್ದಾರಾ..? . ನಮ್ಮದೇಶದ ಒಂದು ಭಾಗ ಅದಕ್ಕೆ ಜೈ ಅಂದಿದ್ದಾರೆ ತಪ್ಪೇನಿದೆ. ಹುಬ್ಬಳ್ಳಿ ಬೆಂಗಳೂರಿನಲ್ಲಿ ಪಾಕ್ ಗೆ ಜೈಕಾರ ಕೂಗಿದ್ರು ಆಗ ಕನ್ನಡಪರ ಹೋರಾಟಗಾರರು ಎಲ್ಲಿಗೆ ಹೋಗಿದ್ರು ಎಂದು ಪ್ರಶ್ನಿಸಿದರು. : – - – - - …