ಮದುವೆ ಬಳಿಕ ಆನ್ ಸ್ಕ್ರೀನ್’ನಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ ದಿಗಂತ್-ಐಂದ್ರಿತಾ ಬೆಂಗಳೂರು, ಫೆಬ್ರವರಿ 28, 2020 (..):ವೈವಾಹಿಕ ಬದುಕು ಆರಂಭಿಸಿರುವ ದಿಗಂತ್-ಐಂದ್ರಿತಾ ಇದೀಗ ಹೊಸ ಸಿನಿಮಾವೊಂದರಲ್ಲಿ ಒಟ್ಟಾಗಿ ಅಭಿನಯಿಸಲಿದ್ದಾರೆ. ವಿನಾಯಕ ಕೋಡ್ಸರ ನಿರ್ದೇಶನದ ಸಿಲ್ಮ್ ಮಂಜು ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ದಿಗಂತ್ ಮತ್ತು ಐಂದ್ರಿತಾ ರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅಡಿಕೆ ಬೆಳೆಗಾರನಾಗಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪ್ರಧಾನವಾಗಿರುವ ಈ ಚಿತ್ರ ಬಹುತೇಕ ಮಲೆನಾಡಿನಲ್ಲೇ ಚಿತ್ರೀಕರಣಗೊಳ್ಳಲಿದೆ. ದಿಗಂತ್, ಐಂದ್ರಿತಾ ರೇ ಜೊತೆಗೆ ಕಿರುತೆರೆ ನಟಿ ರಂಜನಿ ರಾಘವನ್ ಕೂಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.