ಉಗ್ರರ ಜತೆ ಗುಂಡಿನ ಕಾಳಗದ ವೇಳೆ ಕೋಲಾರ ಮೂಲದ ಯೋಧ ಹುತಾತ್ಮ… ಕೋಲಾರ, ಫೆ.27,2020(..) ಉಗ್ರರ ಜತೆ ಗುಂಡಿನ ಕಾಳಗದ ವೇಳೆ ಕೋಲಾರ ಮೂಲದ ಯೋಧ ಹುತಾತ್ಮರಾಗಿರುವ ಘಟನೆ ನಡೆದಿದೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಹಾಗೂ ಯೋಧರ ನಡುವೆ ನಡೆದ ಚಕಮಕಿಯಲ್ಲಿ ಕೋಲಾರ ಮೂಲದ ಯೋಧ ಪ್ರಶಾಂತ್ ಹುತಾತ್ಮರಾಗಿದ್ದಾರೆ. ಯೋಧ ಪ್ರಶಾಂತ್(25) ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಣಿಂಬೆಲೆ ಗ್ರಾಮದವರಾಗಿದ್ದಾರೆ. ನಿನ್ನೆ ಜಮ್ಮುಕಾಶ್ಮೀರದ ರಜೋರಿ ಪ್ರದೇಶದಲ್ಲಿ ಉಗ್ರರ ಜತೆ ಗುಂಡಿನ ಕಾಳಗದ ವೇಳೆ ಪ್ರಶಾಂತ್ ಹುತಾತ್ಮರಾಗಿದ್ದಾರೆ. ಯೋಧ ಮೃತಪಟ್ಟಿದ್ದು, ಪ್ರಶಾಂತ್ ಅವರ ಪಾರ್ಥಿವ ಶರೀರವನ್ನು ನಾಳೆ ಸ್ವ ಗ್ರಾಮಕ್ಕೆ ಕಳುಹಿಸಲಾಗುತ್ತಿದೆ. ಮದ್ರಾಸ್ ಎಂಆರ್‍ಸಿ 17ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಯೋಧನ ಸಾವಿನ ಸುದ್ದಿಯಿಂದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. : - - --