ನಾನು ಫೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡಿ ಗೆಲ್ಲುವೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ವಿಜಯಪುರ,ಮಾರ್ಚ್,13,2024(..):ತಮ್ಮ ವಿರುದ್ದ ಗೋಬ್ಯಾಕ್ ಅಭಿಯಾನ ನಡೆಸುತ್ತಿರುವವರಿಗೆ ಟಾಂಗ್ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಾನು ಫೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡಿ ಗೆಲ್ಲುವೆ ಎಂದು ಹೇಳಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ, ಹೊರಗಿನವರು ಬಂದು ಗೋಬ್ಯಾಕ್ ಅಭಿಯಾನ ಮಾಡುತ್ತಿದ್ದಾರೆ. ಯಾರಿಗೆ ಟಿಕೆಟ್ ಕೊಟ್ರೂ ಗೆಲ್ಲುವ ಕ್ಷೇತ್ರ. ಹಾಗಾಗಿ ಬೇಡಿಕೆ ಇದೆ ಎಂದರು. ಬೇರೆಯವರು ಟಿಕೆಟ್ ಕೇಳಿದ್ದು ತಪ್ಪಲ್ಲ. ಆದರೆ ಅವಮಾನ ಸರಿಯಲ್ಲ. ನಾಣು ವಿಚಲಿತಳಾಗಲ್ಲ. ಕಾರ್ಯಕರ್ತರೂ ಸಹ ವಿಚಲಿತರಾಗಲ್ಲ. ನಾನು ಫೈಟರ್ ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡಿ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. : –--- - - – -