ಭಾರತೀಯ ಮೂಲದ ವಿನಿ ರಾಮನ್ ಕೈ ಹಿಡಿಯಲಿದ್ದಾರೆ ಆಸಿಸ್ ಕ್ರಿಕೆಟಿಗ ಗ್ಲೇನ್ ಮ್ಯಾಕ್ಸ್​ವೆಲ್ ಸಿಡ್ನಿ, ಫೆಬ್ರವರಿ 27, 2020 (..):ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಗ್ಲೇನ್ ಮ್ಯಾಕ್ಸ್​ವೆಲ್ ಭಾರತೀಯ ಮೂಲದ ವಿನಿ ರಾಮನ್​​​ ಜೊತೆಗೆ ಎಂಗೇಜ್​’ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಇನ್​ಸ್ಟಾಗ್ರಾಂ​ನಲ್ಲಿ ಹಾಕಿರುವ ಮ್ಯಾಕ್ಸ್​ವೆಲ್​​, ಸಂತಸದ ಕ್ಷಣಗಳನ್ನ ಶೇರ್ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮ್ಯಾಕ್ಸ್​ವೆಲ್ ಹಾಗೂ ವಿನಿ ಡೇಟಿಂಗ್ ಮಾಡುತ್ತಿದ್ದರು. ಮೆಲ್ಬೋರ್ನ್​ನಲ್ಲಿ ವಾಸವಿರುವ ಭಾರತೀಯ ಮೂಲದವರಾದ ವಿನಿ ರಾಮನ್, ಗ್ಲೇನ್​​ಗೆ ಮನಸೋತಿದ್ದಾರೆ. ಇಬ್ಬರು ಜೊತೆಗಿರುವ ಫೋಟೋ ಈ ಮೊದಲು 2017ರಲ್ಲಿ ಸೋಷಿಯಲ್​​ ಮೀಡಿಯಾದಲ್ಲಿ ಕಂಡು ಹರಿದಾಡಿದ್ದವು. 2019ರ ಆಸ್ಟ್ರೇಲಿಯಾ ಕ್ರಿಕೆಟ್​​ ಅವಾರ್ಡ್​ ಕಾರ್ಯಕ್ರಮದಲ್ಲೂ, ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು.