ಶಿವಣ್ಣನ ದ್ರೋಣ ಟ್ರೈಲರ್ ಲಾಂಚ್ ಮಾಡಿದ ಪವರ್ ಸ್ಟಾರ್… ಬೆಂಗಳೂರು,ಫೆ,25,(..): ವಿವಿಧ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಈ ಬಾರಿ ಶಾಲಾ ಶಿಕ್ಷಕನ ಗೆಟಪ್​​ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಬರೋ ಮುಂಚೆ ಮುನ್ನೋಟವನ್ನು ದ್ರೋಣ ಗೆಟಪ್​​ನಲ್ಲಿರುವ ಶಿವಣ್ಣ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಒಂದೂವರೇ ವರ್ಷದ ಪರಿಶ್ರಮದ ದ್ರೋಣ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ದ್ರೋಣ ಟ್ರೈಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿದ್ದಾರೆ. ಶಾಲಾ ಶಿಕ್ಷಕನಾಗಿ ಡೈರೆಕ್ಟರ್ಸ್ ಡಾರ್ಲಿಂಗ್ ಶಿವಣ್ಣ ಅಭಿನಯಿಸಿದ್ದಾರೆ. ಸರ್ಕಾರಿ ಶಾಲೆ ನೋವು-ನಲಿವು , ಒಲವು-ಗೆಲುವು , ಶಿಕ್ಷಣ ವ್ಯವಸ್ಥೆಯ ಬೆಳಕು-ಕೊಳಕು ಎಲ್ಲವನ್ನು ಸಂಗ್ರಹಿಸಿ ಸಿಹಿ ಸಿನಿಮಾವಾಗಿಸಿದ್ದಾರೆ