ಕಾಡಾನೆ ದಾಳಿಯಿಂದ ಯುವಕನಿಗೆ ಗಾಯ… ಮೈಸೂರು,ಫೆ,24,2020(..): ಕಾಡಾನೆ ದಾಳಿಯಿಂದ ಯುವಕ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಶಿವು ಆನೆದಾಳಿಗೆ ಸಿಲುಕಿ ಗಾಯಗೊಂಡ ಗಾಯಾಳು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಹಾಡಿಯಲ್ಲಿ ಈ ಘಟನೆ ನಡೆದಿದೆ. ಶಿವು ಮೀನು ಹಿಡಿಯಲು ನದಿ ಕಡೆ ತೆರಳಿದ್ದು ಈ ವೇಳೆ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಗಾಯಗೊಂಡ ಶಿವುವನ್ನ ಎಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ವಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. : - – –-